ADVERTISEMENT

ಮೃಣಾಲಿನಿ ಸಾರಾಬಾಯ್‌ ಇನ್ನಿಲ್ಲ

ನೂಪುರ ನಾದ ನಿಲ್ಲಿಸಿದ ಹಿರಿಯ ನೃತ್ಯ ಕಲಾವಿದೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2016, 6:27 IST
Last Updated 21 ಜನವರಿ 2016, 6:27 IST
ಮೃಣಾಲಿನಿ ಸಾರಾಬಾಯ್‌ ಇನ್ನಿಲ್ಲ
ಮೃಣಾಲಿನಿ ಸಾರಾಬಾಯ್‌ ಇನ್ನಿಲ್ಲ   

ನವದೆಹಲಿ (ಏಜೆನ್ಸೀಸ್‌): ಹಿರಿಯ ಶಾಸ್ತ್ರೀಯ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಬಾಯ್‌ (97) ಗುರುವಾರ ಕೊನೆಯುಸಿರೆಳೆದರು.

ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದಿದ್ದರು.

ವಿಜ್ಞಾನಿ ವಿಕ್ರಮ್‌ ಸಾರಾಬಾಯ್‌ ಅವರನ್ನು ಮೃಣಾಲಿನಿ ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ADVERTISEMENT

ಮೃಣಾಲಿನಿ ಅವರು ದರ್ಪಣಾ ನೃತ್ಯ ಶಾಲೆಯ ಮೂಲಕ ಸಾವಿರಾರು ಶಿಷ್ಯರಿಗೆ ಭರತನಾಟ್ಯ ಹಾಗೂ ಕಥಕ್‌ ನೃತ್ಯ ಕಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.