ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯಲ್ಲಿ ಭಾಗವಹಿಸಿ ಜೈಕಾರ ಕೂಗಿದರೆ ₹400 ಕೊಡುತ್ತೇವೆ ಎಂದು ಭರವಸೆ ನೀಡಿದ ಕಾರಣ ನಾನು ರ್ಯಾಲಿ ಗೆ ಹೋಗಿದ್ದೆ. ಆದರೆ ರ್ಯಾಲಿ ಮುಗಿದ ನಂತರ ನನಗೆ ಕೊಟ್ಟದ್ದು ಬರೀ ₹150 ಎಂದು ಹೇಳಿ ಮಹಿಳೆಯೊಬ್ಬರು ಕಣ್ಣೀರಿಡುತ್ತಿರುವ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ದಿನಗೂಲಿ ನೌಕರಳಾದ ಈ ಮಹಿಳೆ ದಿನದ ಕೆಲಸಕ್ಕೆ ಚಕ್ಕರ್ ಹೊಡೆದು ರ್ಯಾಲಿಯಲ್ಲಿ ಭಾಗವಹಿಸಿದ್ದರು. ರ್ಯಾಲಿಯಲ್ಲಿ ಭಾಗವಹಿಸಿದರೆ ₹400 ಮತ್ತು ಧೋತಿ ನೀಡುವುದಾಗಿ ಕಾರ್ಯಕರ್ತರು ಭರವಸೆ ನೀಡಿದ್ದರು. ಆದರೆ ಅವರು ರ್ಯಾಲಿ ಮುಗಿದ ನಂತರ ಬರೀ ₹150 ಕೊಟ್ಟು ಮೋಸ ಮಾಡಿದ್ದಾರೆ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.
ಆದಾಗ್ಯೂ, ಯಾವ ಪಕ್ಷದ ರ್ಯಾಲಿ ಯಲ್ಲಿ ನೀವು ಭಾಗವಹಿಸಿದ್ದೀರಿ? ಎಂದು ಕೇಳಿದಾಗ ಆ ಮಹಿಳೆ ಮೋದಿಯವರ ಪಕ್ಷ ಎಂದು ಹೇಳಿದ್ದಾರೆ.
ನಾನು ನನ್ನ ಕೆಲಸವನ್ನು ಬಿಟ್ಟು ಬೆಳಗ್ಗೆ 8.30ಕ್ಕೆ ರ್ಯಾಲಿಯಲ್ಲಿ ಭಾಗವಹಿಸಿ ಜೈಕಾರ ಕೂಗಿದ್ದೇನೆ. ಆದರೆ ರ್ಯಾಲಿ ಮುಗಿದ ನಂತರ ₹400 ಬದಲು ₹150 ನೀಡಿ ಕಾರ್ಯಕರ್ತರು ಇಲ್ಲಿಂದ ಜಾಗ ಖಾಲಿ ಮಾಡಿದ್ದಾರೆ ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.