ADVERTISEMENT

ಮೋದಿ, ಮಮತಾ ಜನತಂತ್ರಕ್ಕೆ ಅಪಾಯ– ಸೋನಿಯಾ ಟೀಕೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2016, 19:58 IST
Last Updated 26 ಏಪ್ರಿಲ್ 2016, 19:58 IST

ಕ್ಯಾನಿಂಗ್, ಪಶ್ಚಿಮ ಬಂಗಾಳ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಜಾಪ್ರಭುತ್ವ ಮತ್ತು ಬಹುತ್ವ ಸಿದ್ಧಾಂತಕ್ಕೆ ಅಪಾಯ ಒಡ್ಡುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿದರು.

ಈ ಇಬ್ಬರಿಗೂ ಹಿಂದಿನ ಸರ್ಕಾರ ಮಾಡದೇ ಇರುವ ಕೆಲಸವನ್ನು ಹೇಳಿಕೊಂಡು ತಿರುಗಾಡುವುದು ಒಂದು ಚಾಳಿಯಾಗಿದೆ ಎಂದು ಹರಿಹಾಯ್ದರು.
ಮೋದಿ ಮತ್ತು ಮಮತಾ ಮಧ್ಯೆ ಹೊಂದಾಣಿಕೆ ಆಗಿರುವುದು ಪಶ್ಚಿಮ ಬಂಗಾಳಕ್ಕೆ ‘ಅಪಾಯ’ ಎಂದರು.

ಮೋದಿ ನೇತೃತ್ವದ ಸರ್ಕಾರವು ದೇಶದ ಬಹುತ್ವ ಸಿದ್ಧಾಂತ, ಜಾತ್ಯತೀತ ವ್ಯವಸ್ಥೆ ಮತ್ತು ಪರಂಪರೆಗೆ ಬೆದರಿಕೆ ಉಂಟುಮಾಡಿದೆ ಎಂದು ಸೋನಿಯಾ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ತಿಳಿಸಿದರು.

ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಅಧಿಕಾರಕ್ಕೆ ಬಂದಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವು ಜನರನ್ನು ವಂಚಿಸಿದೆ ಎಂದು ಆಪಾದಿಸಿದರು. ಈ ಬಾರಿ ಜನರನ್ನು ಬೆದರಿಸಿ ಮತ ಪಡೆಯಲು ಮಮತಾ ಪಕ್ಷ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.