ADVERTISEMENT

ಮೋದಿ ವಿರುದ್ಧ ವೈಯಕ್ತಿಕ ಟೀಕೆ ನಿಲ್ಲಿಸಿ: ಜೇಟ್ಲಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2014, 9:26 IST
Last Updated 23 ಏಪ್ರಿಲ್ 2014, 9:26 IST

ನವದೆಹಲಿ (ಪಿಟಿಐ): ವಾಧ್ರಾ ವಿರುದ್ಧದ ಟೀಕೆ ಕುರಿತಂತೆ ಪ್ರಿಯಾಂಕಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಅರುಣ್‌ ಜೇಟ್ಲಿ ಮೋದಿ ಮೇಲಿನ ವೈಯಕ್ತಿಕ ಟೀಕೆಯನ್ನು ಕಾಂಗ್ರೆಸ್‌ ಪಕ್ಷ ನಿಲ್ಲಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

ಚುನಾವಣಾ ಪ್ರಚಾರ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜೇಟ್ಲಿ, ವಾಧ್ರಾ ಮೇಲಿನ ಟೀಕೆಯಿಂದ ಪ್ರಿಯಾಂಕ ಗಾಂಧಿ ಅವರಿಗೆ ನೋವಾಗಿದೆ. ಆದೇ  ರೀತಿ ಕಾಂಗ್ರೆಸ್‌ ಪಕ್ಷವು ಮೋದಿ ಮೇಲಿನ ವೈಯಕ್ತಿ ಟೀಕೆ ಮತ್ತು ವಿವಾಹ  ವಿಚಾರಗಳನ್ನು ಕೆದಕುತ್ತಿರುವುದು ಮೋದಿಗೂ ನೋವುಂಟಾಗಿರಬೇಕಲ್ಲಾ? ಎಂದು ಮಾರ್ಮಿಕವಾಗಿ ಕೆಣಕಿದರು.

ವೈಯಕ್ತಿಕ ವಿಚಾರಗಳನ್ನು ಸಾರ್ವಜನಿಕ ಚರ್ಚಾ ವಿಚಾರಗಳನ್ನಾಗಿ ಮಾಡಬಾರದು. ಪ್ರಿಯಾಂಕಾ ನೋವು   ಕಾಂಗ್ರೆಸ್‌ ಸ್ನೇಹಿತರಿಗೆ ಈಗ ಅರ್ಥವಾಗಿರಬೇಕು ಎಂದು  ಜೇಟ್ಲಿ ಛೇಡಿಸಿದರು.

ಪ್ರಿಯಾಂಕಾ ಪ್ರತಿಕ್ರಿಯೆಯಿಂದ ಸಂತಸವಾಗಿದೆ. ಯಾವುದೇ  ಪಕ್ಷಗಳ ನಾಯಕರು ವೈಯಕ್ತಿಕ ವಿಚಾರಗಳನ್ನು ಟೀಕಿಸಬಾರದು ಎಂಬುದನ್ನು ನಾನು ಒಪ್ಪುತ್ತೇನೆ. ಇದನ್ನು ಕಾಂಗ್ರಸ್‌ ಪಕ್ಷದ ನಾಯಕರು ತಿಳಿಯಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT