ADVERTISEMENT

ರಜನೀಕಾಂತ್‌ ಪುತ್ರಿ ಸೌಂದರ್ಯ ಚಾಲನೆ ಮಾಡುತ್ತಿದ್ದ ಕಾರು ಆಟೋಗೆ ಡಿಕ್ಕಿ

ಏಜೆನ್ಸೀಸ್
Published 28 ಫೆಬ್ರುವರಿ 2017, 14:03 IST
Last Updated 28 ಫೆಬ್ರುವರಿ 2017, 14:03 IST
ರಜನೀಕಾಂತ್‌ ಪುತ್ರಿ ಸೌಂದರ್ಯ ಚಾಲನೆ ಮಾಡುತ್ತಿದ್ದ ಕಾರು ಆಟೋಗೆ ಡಿಕ್ಕಿ
ರಜನೀಕಾಂತ್‌ ಪುತ್ರಿ ಸೌಂದರ್ಯ ಚಾಲನೆ ಮಾಡುತ್ತಿದ್ದ ಕಾರು ಆಟೋಗೆ ಡಿಕ್ಕಿ   

ಚೆನ್ನೈ: ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರ ಪುತ್ರಿ ಸೌಂದರ್ಯ ಅವರ ಕಾರು ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿ ಚಾಲಕ ಗಾಯಗೊಂಡಿದ್ದಾನೆ.

ಸೌಂದರ್ಯ ಅವರು ಚಲಿಸುತ್ತಿದ್ದ ಕಾರು ಆಟೋರಿಕ್ಷಾಗೆ ಡಿಕ್ಕಿಯಾಗಿರುವ ಘಟನೆ ಮಂಗಳವಾರ ಚೆನ್ನೈನಲ್ಲಿ ನಡೆದಿದೆ.

ಚಿಕಿತ್ಸೆ ವೆಚ್ಚ ಮತ್ತು ವಾಹನ ರಿಪೇರಿಗೆ ಅಗತ್ಯ ಖರ್ಚು ಭರಿಸುವುದಾಗಿ ಭರವಸೆ ನೀಡಿದ್ದು, ಚಾಲಕ ಯಾವುದೇ ದೂರು ದಾಖಲಿಸಿಲ್ಲ.



ವಿಐಪಿ2 ನಿರ್ದೇಶನ: ಸದ್ಯ ಸೌಂದರ್ಯ ಅವರು ‘ವಿಐಪಿ 2’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.  ಧನುಷ್‌ ಹಾಗೂ ಕಾಜೋಲ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ADVERTISEMENT


ವಿಚ್ಛೇದನ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಸೌಂದರ್ಯ ವಿವಾಹ ವಿಚ್ಛೇದನ  ಅರ್ಜಿ ಸಲ್ಲಿಸಿದ್ದಾರೆ. 2010ರಲ್ಲಿ ಅಶ್ವಿನ್‌ ರಾಮ್‌ಕುಮಾರ್ ಅವರೊಂದಿಗೆ ವಿವಾಹ ನೆರವೇರಿತ್ತು. ಇವರಿಗೆ 1 ವರ್ಷ ವಯಸ್ಸಿನ ಮಗನಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.