ADVERTISEMENT

‘ರಫ್ತಿಗೆ ಹೊಸ ಮಾರುಕಟ್ಟೆ ಹುಡುಕಾಟ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 19:30 IST
Last Updated 24 ಮಾರ್ಚ್ 2018, 19:30 IST
‘ರಫ್ತಿಗೆ ಹೊಸ ಮಾರುಕಟ್ಟೆ ಹುಡುಕಾಟ’
‘ರಫ್ತಿಗೆ ಹೊಸ ಮಾರುಕಟ್ಟೆ ಹುಡುಕಾಟ’   

ನವದೆಹಲಿ: ಅಮೆರಿಕ, ಚೀನಾದ ವಾಣಿಜ್ಯ ಪೈಪೋಟಿಯಿಂದಾಗಿ ರಫ್ತಿಗಾಗಿ ಭಾರತ ಹೊಸ ಮಾರುಕಟ್ಟೆ ಹುಡುಕುತ್ತಿದೆ ಎಂದು ವಾಣಿಜ್ಯ ಮತ್ತು ಉದ್ದಿಮೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.

ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ₹3.89 ಲಕ್ಷ ಕೋಟಿ ತೆರಿಗೆ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡ ನಿರ್ಧಾರದಿಂದ ಮಾರುಕಟ್ಟೆ ಮತ್ತು ಹೂಡಿಕೆದಾರರಲ್ಲಿ ಅಸ್ಥಿರತೆ ಮೂಡಿದೆ. ಅಮೆರಿಕದ ನಿರ್ಧಾರದಿಂದ ಜಾಗತಿಕ ಷೇರು ಮಾರುಕಟ್ಟೆ ಮೇಲೆಯೂ ಒತ್ತಡ ಉಂಟಾಗಿದೆ.

ಅಮೆರಿಕದ ನಿರ್ಧಾರಕ್ಕೆ ಪ್ರತಿಯಾಗಿ ಚೀನಾ ಸಹ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ₹19,497 ಕೋಟಿ ಹೆಚ್ಚುವರಿ ಸುಂಕ ವಿಧಿಸುವುದಾಗಿ ಹೇಳಿದೆ. ಚೀನಾ ಮತ್ತು ಅಮೆರಿಕದ ನಡುವೆ ವಾಣಿಜ್ಯ ಪೈಪೋಟಿ ಹೆಚ್ಚಲಿರುವ ಸಾಧ್ಯತೆ ಇದ್ದು, ಏಷ್ಯಾ ರಾಷ್ಟ್ರಗಳ ಮಾರುಕಟ್ಟೆಗಳ ಮೇಲೂ ಇದರ ಪರಿಣಾಮವಾಗಲಿದೆ.

ADVERTISEMENT

‘ಜಾಗತಿಕ ಮಟ್ಟದಲ್ಲಿ ಗಂಭೀರ ಸವಾಲುಗಳಿವೆ ಎನ್ನುವುದು ವಾಸ್ತವ. ಯಾವುದೇ ದೇಶ ಏಕಪಕ್ಷೀಯವಾಗಿ ಕ್ರಮ ಕೈಗೊಂಡರೆ, ಅದನ್ನು ಗಮನಿಸಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ. ಮಾರುಕಟ್ಟೆ ಸಂಶೋಧನೆ ಮೂಲಕ, ಹೊಸ ಮಾರುಕಟ್ಟೆ ಮತ್ತು ಉತ್ಪನ್ನಗಳಿಗಾಗಿ ಅನ್ವೇಷಿಸುತ್ತಿದ್ದೇವೆ’ ಎಂದು ಪ್ರಭು ಹೇಳಿದ್ದಾರೆ.

‘ಆಫ್ರಿಕಾ ರಾಷ್ಟ್ರಗಳಲ್ಲಿ ರಫ್ತು ಮಾರುಕಟ್ಟೆ ಹೊಂದುವ ಸಲುವಾಗಿ ಆ ರಾಷ್ಟ್ರಗಳ ಕೆಲವು ನಾಯಕರನ್ನು ಭೇಟಿ ಮಾಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.