ಹೈದರಾಬಾದ್ (ಪಿಟಿಐ): ರಾಜ್ಯದಲ್ಲಿ ಸುಧಾರಿತ ಗ್ರಿಡ್ ಜಾಲದ ಕಾರ್ಯಾಸಾಧ್ಯತೆ ಅಧ್ಯಯನ ಕೈಗೊಳ್ಳಲು ಫ್ಯೂಜಿ ಎಲೆಕ್ಟಿಕ್ ಕಂಪೆನಿಯನ್ನು ಆಂಧ್ರಪ್ರದೇಶ ಸರ್ಕಾರ ಕೋರಿದೆ. ರಾಜಧಾನಿಗೆ ಹೊಸ ರೂಪು ಕೊಡಲು ಜಪಾನ್ ಪರಿಣಿತರನ್ನೂ ಆಂಧ್ರಪ್ರದೇಶ ಆಹ್ವಾನಿಸಿದೆ.
ಗ್ರಿಡ್ ಜಾಲದ ಅಧ್ಯಯನ ಕೈಗೊಳ್ಳಲು ಡಿಸೆಂಬರ್ ಅಥವಾ ಜನವರಿಯಲ್ಲಿ ಪ್ರತಿನಿಧಿಗಳನ್ನು ಕಳುಹಿಸುವುದಾಗಿ ಎಲೆಕ್ಟ್ರಿಕ್ ಕಂಪೆನಿ ಹೇಳಿದೆ.
ಮೂರು ಮಹಾನಗರ ಮತ್ತು 14 ಸ್ಮಾರ್ಟ್ ಸಿಟಿ ನಿರ್ಮಿಸುವ ಯೋಜನೆಯನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೊಂದಿದ್ದು ಈ ಯೋಜನೆಗಳಿಗೂ ನೆರವು ನೀಡುವಂತೆ ಫ್ಯೂಜಿ ಕಂಪೆನಿಯನ್ನು ಮುಖ್ಯಮಂತ್ರಿ ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.