ADVERTISEMENT

ರಾಜಸ್ತಾನ ಸಚಿವರಿಗೆ ಬೆದರಿಕೆ ಇ–ಮೇಲ್

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2014, 13:58 IST
Last Updated 28 ಡಿಸೆಂಬರ್ 2014, 13:58 IST

ಜೈಪುರ (ಐಎಎನ್‌ಎಸ್‌): ರಾಜಸ್ತಾನದ ಗೃಹಮಂತ್ರಿ ಸೇರಿದಂತೆ ಕೆಲವು ಸಚಿವರುಗಳಿಗೆ ಬಾಂಬ್‌ ಸ್ಪೋಟ ನಡೆಸುವುದಾಗಿ ಇಂಡಿಯನ್‌ ಮುಜಾಹಿದೀನ್‌ (ಐ.ಎಂ)  ಬೆದರಿಕೆ ಇ–ಮೇಲ್‌ಗಳನ್ನು ಕಳುಹಿಸಿದೆ ಎಂದು ಪೊಲೀಸ್‌ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ರಾಜಸ್ತಾನದಲ್ಲಿ ಜನವರಿ 26ರಂದು ಬಾಂಬ್‌ ದಾಳಿ ನಡೆಯಬಹುದು ಎಂಬ ಬೆದರಿಕೆ ಒಡ್ಡುವ ಇ–ಮೇಲ್‌ ಹಲವು ಸಂಪುಟ ಸಚಿವರಿಗೆ ಬಂದಿದೆ ಎಂದು ಇಲ್ಲಿನ ಡಿಜಿಪಿ ಓಮೇಂದ್ರ ಭಾರಧ್ವಜ್‌ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಗುರುವಾರ ಇದರ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಇ–ಮೇಲ್‌ಗಳನ್ನು ನಂಬಬಹುದೇ, ಇಲ್ಲವೇ ಎಂಬುದನ್ನು ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿ ತಿಳಿದ್ದಾರೆ.  ಸಚಿವರಿಗೆ ಡಿಸೆಂಬರ್‌ 22ರಂದು ಇ– ಮೇಲ್‌ಗಳು ಬಂದಿದೆ.

ADVERTISEMENT

‘ರಾಜ್ಯದ ಮುಖ್ಯ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದು, ಯಾವುದೇ ಕಾರಣಕ್ಕೂ ಅಹಿತಕರ ಘಟನೆಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.