ADVERTISEMENT

ರಾಜೀವ್‌ ಗಾಂಧಿ ಹತ್ಯೆ: ಇನ್ನೂ ಪೂರ್ಣಗೊಳ್ಳದ ತನಿಖೆ !

ಮಾಜಿ ಪ್ರಧಾನಿ ಪುಣ್ಯಸ್ಮರಣೆ: ಸೋನಿಯಾ, ರಾಹುಲ್‌ ನಮನ

ಪಿಟಿಐ
Published 21 ಮೇ 2018, 19:29 IST
Last Updated 21 ಮೇ 2018, 19:29 IST
ರಾಜೀವ್‌ ಪುಣ್ಯಸ್ಮರಣೆ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಿಯಾಂಕ ಪುಷ್ಪನಮನ ಸಲ್ಲಿಸಿದರು. ರಾಬರ್ಟ್‌ ವಾದ್ರಾ ಇದ್ದಾರೆ ಪಿಟಿಐ ಚಿತ್ರ
ರಾಜೀವ್‌ ಪುಣ್ಯಸ್ಮರಣೆ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಿಯಾಂಕ ಪುಷ್ಪನಮನ ಸಲ್ಲಿಸಿದರು. ರಾಬರ್ಟ್‌ ವಾದ್ರಾ ಇದ್ದಾರೆ ಪಿಟಿಐ ಚಿತ್ರ   

ನವದೆಹಲಿ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಯಾಗಿ 27 ವರ್ಷವಾದರೂ, ಅವರ ಹತ್ಯೆಯ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ.

ಸಿಬಿಐ ನೇತೃತ್ವದ ಬಹುಶಿಸ್ತೀಯ ಮೇಲ್ವಿಚಾರಣಾ ಏಜೆನ್ಸಿ (ಎಂಡಿಎಂಎ) ತನಿಖೆ ನಡೆಸುತ್ತಿದೆ. ಎಷ್ಟು ಸಾಧ್ಯವೋ ಅಷ್ಟು ‘ತ್ವರಿತವಾಗಿ’ ಪ್ರಕರಣದ ತನಿಖೆ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕಳೆದ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚಿಸಿತ್ತು.

ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠಕ್ಕೆ ಮಾಹಿತಿ ನೀಡಿದ್ದ ಎಂಡಿಎಂಎ, ‘ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದ್ದು, ರಾಜೀವ್‌ ಹತ್ಯೆಗೆ ಸಂಬಂಧಿಸಿದಂತೆ ಕೆಲವು ಸಾಕ್ಷ್ಯಗಳ ವಿಚಾರಣೆ ಇನ್ನೂ ನಡೆಸಬೇಕಿದೆ. ಸಾಕ್ಷಿಗಳು ವಿವಿಧ ದೇಶಗಳಲ್ಲಿದ್ದು, ಅವರಿಗೆ ಪತ್ರ ಕಳುಹಿಸಲಾಗಿದೆ’ ಎಂದು ತಿಳಿಸಿತ್ತು.

ADVERTISEMENT

ಕಾಂಗ್ರೆಸ್‌ ನಾಯಕರಿಂದ ನಮನ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ  ಅವರ 27ನೇ ಪುಣ್ಮಸ್ಮರಣೆ ಅಂಗವಾಗಿ ಕಾಂಗ್ರೆಸ್‌ ನಾಯಕಿ ಸೋನಿಯಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ರಾಜೀವ್‌ ಅವರ ಸಮಾಧಿ ಸ್ಥಳ ವೀರಭೂಮಿಗೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.