ಮುಂಬೈ: ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರ ತಂದೆ, ಚಲನ ಚಿತ್ರ ನಿರ್ಮಾಪಕ ರಾಮ್ ಮುಖರ್ಜಿ(84) ದೀರ್ಘ ಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾದರು.
ರಕ್ತದೊತ್ತಡ ಕಡಿಮೆಯಾದದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಅವರು ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ರಾಮ್ ಮುಖರ್ಜಿ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ರಾಮ್ ಮುಖರ್ಜಿ ಅವರು ಹಮ್ ಹಿಂದೂಸ್ತಾನಿ, ಲೀಡರ್, ಹಾಗೂ 1996ರಲ್ಲಿ ರಾಣಿ ಮುಖರ್ಜಿಯ ಚೊಚ್ಚಲ ಚಿತ್ರ ಬಿಯರ್ ಫೋಲ್ ಅನ್ನು ನಿರ್ಮಾಣ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.