ADVERTISEMENT

ರೆಸಾರ್ಟ್‌ ತಾತ್ಕಾಲಿಕ ಸ್ಥಗಿತ

ಪಿಟಿಐ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ರೆಸಾರ್ಟ್‌ ತಾತ್ಕಾಲಿಕ ಸ್ಥಗಿತ
ರೆಸಾರ್ಟ್‌ ತಾತ್ಕಾಲಿಕ ಸ್ಥಗಿತ   

ಚೆನ್ನೈ: ಎಐಎಡಿಎಂಕೆ ಪಕ್ಷದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದ ಸಂದರ್ಭದಲ್ಲಿ ಒಂದು ವಾರ ಕಾಲ ಪಕ್ಷದ 100ಕ್ಕೂ ಹೆಚ್ಚು ಶಾಸಕರು ಬೀಡುಬಿಟ್ಟಿದ್ದ ಗೋಲ್ಡನ್‌ ಬೇ ರೇಸಾರ್ಟ್‌ ಅನ್ನು ದುರಸ್ತಿ ಕಾರ್ಯಗಳಿಗಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

‘ರೆಸಾರ್ಟ್‌ ದುರಸ್ತಿ ಪ್ರಗತಿಯಲ್ಲಿದೆ’ ಎಂಬ ನೋಟಿಸ್‌ ಅನ್ನು ಕೂವತೂರಿನಲ್ಲಿರುವ ರೆಸಾರ್ಟ್‌ನ ಆವರಣ ಗೋಡೆಯಲ್ಲಿ ಅಂಟಿಸಲಾಗಿದೆ.

ವಿಧಾನಸಭೆಯಲ್ಲಿ ನಡೆಯಲಿರುವ ವಿಶ್ವಾಸಮತ ಪರೀಕ್ಷೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಶಾಸಕರು ರೆಸಾರ್ಟ್‌ನಿಂದ ಹೊರಟ ಮರು ದಿನ ಅದನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರನ್ನು ಬೆಂಬಲಿಸುತ್ತಿದ್ದ 100ಕ್ಕೂ ಹೆಚ್ಚು ಶಾಸಕರು ಫೆ.8ರಿಂದ ಈ ರೆಸಾರ್ಟ್‌ನಲ್ಲಿ ತಂಗಿದ್ದರು. ಶಾಸಕರನ್ನು ಬಲವಂತವಾಗಿ ರೆಸಾರ್ಟ್‌ನಲ್ಲಿ ಕೂಡಿಹಾಕಲಾಗಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು.  ಚೆನ್ನೈನಿಂದ 80 ಕಿ.ಮೀ ದೂರದಲ್ಲಿರುವ ಈ ರೆಸಾರ್ಟ್‌, ಒಂದು ವಾರ ಕಾಲ  ರಾಜಕೀಯ ಚಟುವಟಿಕೆಯ ಕೇಂದ್ರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.