ADVERTISEMENT

ರೇಗಿಸಿದವನಿಗೆ ಬುದ್ದಿ ಕಲಿಸಿದ ಯುವತಿ

​ಪ್ರಜಾವಾಣಿ ವಾರ್ತೆ
Published 19 ಮೇ 2015, 10:57 IST
Last Updated 19 ಮೇ 2015, 10:57 IST

ಆಗ್ರಾ (ಪಿಟಿಐ): ಸಮಾಜವಾದಿ ಪಕ್ಷದ ಸ್ಥಳೀಯ ನಾಯಕರೊಬ್ಬರ ಗನ್‌ಮ್ಯಾನ್‌ ಯುವತಿಯನ್ನು ರೇಗಿಸಿದ ಪರಿಣಾಮ ಆಕೆ ಆತನಿಗೆ ಸರಿಯಾಗಿ ಬುದ್ದಿ ಕಲಿಸಿದ ಘಟನೆ ನಡೆದಿದೆ.

ಈ ಘಟನೆಯ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಭಾರಿ ಸುದ್ದಿ ಮಾಡಿದೆ.

ಯುವತಿ ಸಾದ್ವಿ ಪಾಂಡೆ ತನ್ನ ಸಹೋದರಿಯ ಜೊತೆ ಸ್ಕೂಟಿಯಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ಟ್ರಾಫಿಕ್‌ ಸಿಗ್ನಲ್‌ನಲ್ಲಿ ಇರುವಾಗ ಇವರ ಪಕ್ಕದಲ್ಲೇ ಸಮಾಜವಾದಿ ಪಕ್ಷದ ಸ್ಥಳೀಯ ನಾಯಕ ಅಭಿನವ್‌ ಶರ್ಮಾ ಕಾರು ಬಂದು ನಿಂತಿದೆ. ಕಾರಿನ ಮುಂಭಾಗದಲ್ಲಿದ್ದ ಗನ್‌ಮ್ಯಾನ್‌ ಸಾದ್ವಿ ಪಾಂಡೆಗೆ ಕಣ್ಣು ಹೊಡೆದಿದ್ದಾನೆ. ಕೂಡಲೇ ಸಾಧ್ವಿ ಕಾರನ್ನು ಅಡ್ಡಗಟ್ಟಿ ಕಾರಿನ ಕಿಟಕಿಯನ್ನು ಹೊಡೆದು ಹಾಕಿದ್ದಾರೆ. ಕಾರಿನ ಮುಂಭಾಗದಲ್ಲಿರುವ ಪಕ್ಷದ ಧ್ವಜವನ್ನು ಕಿತ್ತು ಹಾಕಿದ್ದಾರೆ.

ಈ ಹಂತದಲ್ಲಿ ಜನರು ಜಮಾಯಿಸಿದ್ದರಿಂದ ಗೊಂದಲಮಯ ವಾತಾವರಣ ಉಂಟಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಘಟನೆಯಲ್ಲಿ ಸಾದ್ವಿಯ ಮೊಬೈಲ್‌ ಹಾಳಾಗಿದ್ದರಿಂದ ಆಕೆಗೆ ಅಭಿನವ್‌ ಶರ್ಮಾ 6500 ರೂಪಾಯಿ ಪರಿಹಾರ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸಾದ್ವಿ ಪಾಂಡೆ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಆನಂದ್‌ ಶರ್ಮಾ ಸಮಾಜವಾದಿ ಪಕ್ಷದ ನಾಯಕ ಅಲ್ಲ ಎಂದು ಜಿಲ್ಲಾ ಪೊಲೀಸ್‌ ಅಧಿಕಾರಿ ನರೇಶ್‌ ಆಗರ್‌ವಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT