ADVERTISEMENT

ರೈಲು ದರ ಏರಿಕೆಗೆ ಖರ್ಗೆ ತಡೆ

​ಪ್ರಜಾವಾಣಿ ವಾರ್ತೆ
Published 16 ಮೇ 2014, 19:29 IST
Last Updated 16 ಮೇ 2014, 19:29 IST

ನವದೆಹಲಿ: ಎಲ್ಲ ದರ್ಜೆಯ ರೈಲು ಪ್ರಯಾಣ ದರ ಏರಿಕೆಯ ರೈಲ್ವೆ ಮಂಡಳಿಯ ಪ್ರಸ್ತಾಪಕ್ಕೆ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಡೆ­ಯೊಡ್ಡಿದ್ದಾರೆ.

ಮೇ 20ರಿಂದ ಅನ್ವಯವಾಗುವಂತೆ ರೈಲು ಪ್ರಯಾಣ ದರವನ್ನು ಶೇ 14.2ರಷ್ಟು ಏರಿಕೆ ಮಾಡುವುದಾಗಿ ರೈಲ್ವೆ ಮಂಡಳಿ ಘೋಷಿಸಿತ್ತು. ಅದ­ರಲ್ಲಿ, ಇಂಧನ ಹೊಂದಾಣಿಕೆ ಭಾಗ­ವಾಗಿ ಶೇ 4.2ರಷ್ಟು ದರ ಏರಿಕೆ ಮಾಡಬೇಕಿತ್ತು. ಮಂಡಳಿಯು ಸರಕು ಸಾಗಾಣಿಕೆಯಲ್ಲಿಯೂ ಶೇ 6.5ರಷ್ಟು ದರ ಏರಿಕೆ ಮಾಡಿತ್ತು. ಆದರೆ ಸದ್ಯಕ್ಕೆ ದರ ಏರಿಕೆ ಬೇಡ. ಹೊಸ ಸರ್ಕಾರ ಬಂದ ನಂತರವೇ ದರ ಏರಿಕೆ ಮಾಡಿ ಎಂದು ಮಂಡಳಿಗೆ ಖರ್ಗೆ ಅವರು ನೀಡಿದ ನಿರ್ದೇಶನಕ್ಕೆ ಅನು­ಗು­ಣವಾಗಿ ರೈಲ್ವೆ ಸಚಿವಾಲ­ಯವು ದರ ಏರಿಕೆಯನ್ನು ತಡೆ ಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.