ADVERTISEMENT

ರೈಲ್ವೆ ಕ್ರಾಸಿಂಗ್‌: ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಜೂನ್ 2015, 19:30 IST
Last Updated 2 ಜೂನ್ 2015, 19:30 IST

ಮುಂಬೈ (ಪಿಟಿಐ): ಅಂತರರಾಷ್ಟ್ರೀಯ ರೈಲ್ವೆ ಕ್ರಾಸಿಂಗ್‌ ಜಾಗೃತಿ ದಿನಾಚರಣೆ (ಜೂನ್‌ 3– ಬುಧವಾರ) ಅಂಗವಾಗಿ ಕೇಂದ್ರ ಮತ್ತು ಪಶ್ವಿಮ ರೈಲ್ವೆಯು ಕಾವಲು ರಹಿತ ರೈಲ್ವೆ ಕ್ರಾಸಿಂಗ್‌ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಒಂದು ಕೋಟಿಗೂ ಹೆಚ್ಚು ಜನರಿಗೆ ಜಾಗೃತಿ ಕುರಿತ ಮೊಬೈಲ್‌ ಸಂದೇಶಗಳನ್ನು ಕಳುಹಿಸಿದೆ.

ಕಾವಲು ರಹಿತ ರೈಲ್ವೆ ಕ್ರಾಸಿಂಗ್‌ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ರೈಲ್ವೆ 60 ಲಕ್ಷ ಮತ್ತು ಪಶ್ಚಿಮ ರೈಲ್ವೆ 50 ಲಕ್ಷಕ್ಕೂ ಹೆಚ್ಚು ಮೊಬೈಲ್‌ ಸಂದೇಶಗಳನ್ನು ಪ್ರಯಾಣಿಕರಿಗೆ ಕಳುಹಿಸಿದೆ.

‘ಪಶ್ಚಿಮ ರೈಲ್ವೆ ವಲಯದ ವಿವಿಧ ಜಿಲ್ಲೆಗಳಲ್ಲಿರುವ ಕಾವಲು ರಹಿತ ರೈಲ್ವೆ ಕ್ರಾಸಿಂಗ್‌ಗಳ ಬಗ್ಗೆ ಅಧ್ಯಯನ ನಡೆಸಿದ ನಂತರ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಪಶ್ವಿಮ ರೈಲ್ವೆಯ ಅಧಿಕಾರಿ ಶರತ್‌ ಚಂದ್ರಾಯನ್‌ ಹೇಳಿದ್ದಾರೆ. ರೈಲ್ವೆ ಕ್ರಾಸಿಂಗ್‌ನಲ್ಲಿ 2012–13ರಲ್ಲಿ 124, 2013–14ರಲ್ಲಿ 95 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಅಂಕಿಅಂಶ
30 ಸಾವಿರ ದೇಶದಲ್ಲಿರುವ ರೈಲ್ವೆ ಕ್ರಾಸಿಂಗ್‌ಗಳು
19 ಸಾವಿರ ಕಾವಲು ಸಹಿತ ರೈಲ್ವೆ ಕ್ರಾಸಿಂಗ್‌ಗಳು
12 ಸಾವಿರ ಕಾವಲು ರಹಿತ ರೈಲ್ವೆ ಕ್ರಾಸಿಂಗ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.