ADVERTISEMENT

ರೈಲ್ವೆ ವಲಯಕ್ಕೆ ₹51 ಸಾವಿರ ಕೋಟಿ

ಏಜೆನ್ಸೀಸ್
Published 1 ಫೆಬ್ರುವರಿ 2017, 9:02 IST
Last Updated 1 ಫೆಬ್ರುವರಿ 2017, 9:02 IST
ರೈಲ್ವೆ ವಲಯಕ್ಕೆ ₹51 ಸಾವಿರ ಕೋಟಿ
ರೈಲ್ವೆ ವಲಯಕ್ಕೆ ₹51 ಸಾವಿರ ಕೋಟಿ   

ನವದೆಹಲಿ: ಇದೇ ಮೊದಲ ಬಾರಿಗೆ ಸಾಮಾನ್ಯ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್‌ ವಿಲೀನಗೊಳಿಸಲಾಗಿದೆ.

ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ರೈಲ್ವೆ ವಲಯದ ಕ್ರಮಗಳಲ್ಲಿ ಪ್ರಮುಖ ಅಂಶಗಳು;

2017–18ನೇ ಸಾಲಿನಲ್ಲಿ ರೈಲ್ವೆ ಅಭಿವೃದ್ಧಿಗೆ ಒಟ್ಟು ₹1.31 ಲಕ್ಷ ಕೋಟಿ ಖರ್ಚು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದಿಂದ ₹51 ಸಾವಿರ ಕೋಟಿ ಮೀಸಲಿಡಲಾಗಿದೆ.

ADVERTISEMENT

ಐಆರ್‌ಸಿಟಿಸಿ ಮೂಲಕ ರೈಲ್ವೆ ಟಿಕೆಟ್‌ ಬುಕಿಂಗ್‌ ಮಾಡುವವರಿಗೆ ಸೇವಾ ಶುಲ್ಕ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

ದೇಶದ 500 ರೈಲ್ವೆ ನಿಲ್ದಾಣಗಳು ಅಂಗವಿಕಲ ಸ್ನೇಹಿಯಾಗಿ ರೂಪುಗೊಳ್ಳಲಿವೆ. ಅಂಗವಿಕಲ ಸಂಚಾರಕ್ಕೆ ಅನುಕೂಲವಾಗಲು ಲಿಫ್ಟ್‌ ಮತ್ತು ಎಸ್ಕಲೇಟರ್‌ ನಿರ್ಮಾಣ ಕಾರ್ಯ ನಡೆಸಲಾಗುತ್ತದೆ.

ರೈಲು ಪ್ರಯಾಣಿಕರ ಸುರಕ್ಷತೆಗಾಗಿ 5 ವರ್ಷಗಳ ಅವಧಿಗೆ ₹1 ಲಕ್ಷ ಕೋಟಿ ಸುರಕ್ಷಾ ನಿಧಿ ಸ್ಥಾಪಿಸಲಾಗಿದೆ. 2019ರ ವೇಳೆಗೆ ಭಾರತೀಯ ರೈಲ್ವೆಯ ಎಲ್ಲಾ ಕೋಚ್‌ಗಳಲ್ಲಿ ಪರಿಸರ ಸ್ನೇಹಿ ಶೌಚಾಲಯ (Bio-toilet)ಗಳನ್ನು ಅಳವಡಿಸಲಾಗುತ್ತದೆ.

ಪ್ರಸಕ್ತ ಸಾಲಿನಲ್ಲಿ 3,500 ಕಿ.ಮೀ. ರೈಲ್ವೆ ಮಾರ್ಗ ಕಾರ್ಯಾರಂಭವಾಗಲಿದೆ. ಕಳೆದ ವರ್ಷ 2,800 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣದ ಗುರಿಯಿತ್ತು.

2017–18ನೇ ಸಾಲಿನಲ್ಲಿ 25 ಹೊಸ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯಾಗಲಿವೆ ಹಾಗೂ ದೇಶದಲನ 70 ರೈಲ್ವೆ ಯೋಜನೆಗಳಿಗೆ ಸಮ್ಮತಿ ದೊರೆತಿದೆ. ಸರ್ಕಾರಿ ಸ್ವಾಮ್ಯದ ಐಆರ್‌ಸಿಟಿಸಿ ಮತ್ತು ಐಆರ್‌ಸಿಒಎನ್‌ ಸಂಸ್ಥೆಗಳು ಷೇರು ಮಾರುಕಟ್ಟೆ ಪ್ರವೇಶಿಸಿವೆ.

ಹೊಸ ಮೆಟ್ರೋ ರೈಲು ನೀತಿ ಜಾರಿಗೊಳಿಸಲು ಸರ್ಕಾರ ಮುಂದಾಗಿದ್ದು, ಹೆಚ್ಚು ಉದ್ಯೋಗ ಸೃಷ್ಟಿ. ಖಾಸಗಿ ಸಂಸ್ಥೆಗಳೊಂದಿಗೆ ಸಹಭಾಗಿತ್ವದ ಯೋಜನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.