ADVERTISEMENT

ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2014, 15:14 IST
Last Updated 16 ಸೆಪ್ಟೆಂಬರ್ 2014, 15:14 IST

ನವದೆಹಲಿ (ಪಿಟಿಐ): ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಟಿಆರ್‌ಎಸ್‌ ಮತ್ತು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಗೆಲುವು ಕಂಡಿವೆ.

ವಿಧಾನಸಭಾ ಕ್ಷೇತ್ರಗಳ ರಾಜ್ಯವಾರು ಫಲಿತಾಂಶ
ಅಸ್ಸಾಂ(3 ಸ್ಥಾನಗಳು): ಬಿಜೆಪಿ, ಎಐಯುಡಿಎಫ್‌ ಮತ್ತು ಕಾಂಗ್ರೆಸ್‌ ತಲಾ ಒಂದು ಸ್ಥಾನಗಳನ್ನು ಪಡೆದಿವೆ.

ಗುಜರಾತ್‌(9 ಸ್ಥಾನಗಳು): ಬಿಜೆಪಿ ಆರು, ಕಾಂಗ್ರೆಸ್‌ ಮೂರು ಸ್ಥಾನಗಳನ್ನು ಪಡೆದಿವೆ.

ರಾಜಸ್ಥಾನ(4 ಸ್ಥಾನಗಳು): ಬಿಜೆಪಿ ಒಂದು, ಕಾಂಗ್ರೆಸ್‌ ಮೂರು ಸ್ಥಾನಗಳು

ಸಿಕ್ಕಿಂ(1 ಸ್ಥಾನ): ಸ್ವತಂತ್ರ ಅಭ್ಯರ್ಥಿ ಜಯಗಳಿಸಿದ್ದಾರೆ.

ಸೀಮಾಂಧ್ರ (1 ಸ್ಥಾನ): ಟಿಡಿಪಿ ಅಭ್ಯರ್ಥಿ ಗೆಲುವು

ತ್ರಿಪುರ (1ಸ್ಥಾನ): ಸಿಪಿಐ(ಎಂ) ಒಂದು ಸ್ಥಾನದಲ್ಲಿ ಗೆಲುವು ಕಂಡಿದೆ.

ಉತ್ತರ ಪ್ರದೇಶ (11 ಸ್ಥಾನ): ಸಮಾಜವಾದಿ ಪಕ್ಷ 8 ಸ್ಥಾನ, ಬಿಜೆಪಿ 3 ಸ್ಥಾನ.

ಪಶ್ಚಿಮ ಬಂಗಾಳ (2 ಸ್ಥಾನ): ಎರಡು ಸ್ಥಾನಗಳ ಪೈಕಿ ಬಿಜೆಪಿ ಮತ್ತು ತೃಣ ಮೂಲ ಕಾಂಗ್ರೆಸ್‌ ತಲಾ ಒಂದು ಸ್ಥಾನವನ್ನು ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT