ನವದೆಹಲಿ: ವಿಮಾನ ಪ್ರಯಾಣಿಕರಿಗೆ ಇನ್ನು ಮುಂದೆ ಪ್ರಯಾಣದ ವೇಳೆಯೂ ಅಂತರ್ಜಾಲ ಬಳಕೆಗೆ ಅವಕಾಶ ದೊರೆಯಲಿದೆ. ಭಾರತದ ವಾಯುಗಡಿಯೊಳಗೆ ಹಾರಾಟ ನಡೆಸುವ ವೇಳೆ ವಿಮಾನದಲ್ಲಿ ವೈಫೈ ಸೌಲಭ್ಯ ದೊರಕುವಂತೆ ಮಾಡಲು ಕೇಂದ್ರ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ.
ಇದು ಜಾರಿಗೆ ಬಂದರೆ ಪ್ರಯಾಣಿಕರು ಲ್ಯಾಪ್ಟಾಪ್, ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ಫೋನ್ ಮೂಲಕ ಅಂತರ್ಜಾಲ ಬಳಕೆ ಮಾಡಬಹುದು.
ಪ್ರಸ್ತುತ ಭಾರತದ ವಾಯುಗಡಿಯೊಳಗೆ ಹಾರಾಟ ನಡೆಸುವ ಯಾವುದೇ ವಿಮಾನದಲ್ಲೂ ಪ್ರಯಾಣಿಕರಿಗೆ ಅಂತರ್ಜಾಲ ಬಳಕೆಗೆ ಅವಕಾಶವಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.