ADVERTISEMENT

ವಿಶ್ವನಾಥನ್ ಆರ್‌ಬಿಐ ಡೆಪ್ಯುಟಿ ಗವರ್ನರ್‌

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 11:42 IST
Last Updated 28 ಜೂನ್ 2016, 11:42 IST
ಎನ್.ಎಸ್.ವಿಶ್ವನಾಥನ್
ಎನ್.ಎಸ್.ವಿಶ್ವನಾಥನ್   

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಡೆಪ್ಯುಟಿ ಗವರ್ನರ್  ಹುದ್ದೆಗೆ ಎನ್.ಎಸ್.ವಿಶ್ವನಾಥನ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಲಿದೆ.

ಹಾಲಿ ಡೆಪ್ಯುಟಿ ಗವರ್ನರ್ ಎಚ್.ಆರ್.ಖಾನ್ ಅವರ ಅವಧಿ ಮುಂದಿನ ವಾರ ಕೊನೆಗೊಳ್ಳಲಿದೆ.

ವಿಶ್ವನಾಥನ್ ಅವರು 2014ರ ಏಪ್ರಿಲ್‌ನಿಂದ ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಆಯ್ಕೆ ಸಮಿತಿಯು ವಿಶ್ವನಾಥನ್ ಅವರ ನೇಮಕಾತಿಯನ್ನು ಅಂತಿಮಗೊಳಿಸಿದ್ದು, ಈ ಬಗ್ಗೆ ಶೀಘ್ರ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.