ADVERTISEMENT

ವೀಕ್ಷಕರ ಕಾರ್ಯವೈಖರಿ: ಟೀಕೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2014, 19:30 IST
Last Updated 5 ನವೆಂಬರ್ 2014, 19:30 IST

ಚೆನ್ನೈ (ಪಿಟಿಐ): ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರು ಪಕ್ಷದ ಹೈಕಮಾಂಡ್ ನೇಮಿಸಿದ್ದ ವೀಕ್ಷಕರ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋಲಲು ಜಿ. ಕೆ. ವಾಸನ್ ಅವರೇ ಕಾರಣ ಎಂಬ ಹೈಕಮಾಂಡ್ ವೀಕ್ಷಕರ ಅಭಿಪ್ರಾಯ ತಪ್ಪು ಎಂದು ಕಾರ್ತಿ ಹೇಳಿದ್ದಾರೆ.

ರಾಜ್ಯ ಮಟ್ಟದಲ್ಲಿ ಪಕ್ಷವನ್ನು ನಿರ್ವಹಿಸುವ ರೀತಿ ಬದಲಾಗಬೇಕು. ಅದಕ್ಕೆ ಕೇಂದ್ರ ವೀಕ್ಷಕರು ಹೊಸತನವನ್ನು ಮೈಗೂಡಿಸಿಕೊಳ್ಳಬೇಕು ಎಂಬರ್ಥದಲ್ಲಿ ಕಾರ್ತಿ ಮಾತನಾಡಿದ್ದಾರೆ.

ತಮಿಳುನಾಡಿನ ಕಾಂಗ್ರೆಸ್ ವೀಕ್ಷಕರಾಗಿದ್ದ ಮುಕುಲ್ ವಾಸ್ನಿಕ್ ಕಾರ್ಯವೈಖರಿಯ ಬಗ್ಗೆ ವಾಸನ್ ಮತ್ತು ಅವರ ಬೆಂಬಲಿಗರು ಅಸಮಾ­ಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಕಾರ್ತಿ ಸಹ ಅದೇ ಧಾಟಿಯಲ್ಲಿ ಮಾತನಾ­ಡಿರುವುದು ಬಹಳ ಮಹತ್ವ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.