ADVERTISEMENT

ಶಹಾಬುದ್ದೀನ್‌ ವಿರುದ್ಧ ಆರೋಪಪಟ್ಟಿ

ಪಿಟಿಐ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST

ನವದೆಹಲಿ : ಪತ್ರಕರ್ತ ರಾಜದೇವ್‌ ರಂಜನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ನಾಯಕ ಶಹಾಬುದ್ದೀನ್‌ ಅವರ ವಿರುದ್ಧ ಸಿಬಿಐ ಆರೋಪಪಟ್ಟಿ ದಾಖಲಿಸಿದೆ.

2016ರ ಡಿಸೆಂಬರ್‌ನಲ್ಲಿ ಶಹಾಬುದ್ದೀನ್‌ ವಿರುದ್ಧ ಮುಜಪ್ಫರ್‌ಪುರ ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ಆರೋಪಪಟ್ಟಿ ದಾಖಲಿಸಿತ್ತು. ಈಗ ಸಲ್ಲಿಸಿರುವ ಆರೋಪಪಟ್ಟಿ ಇದಕ್ಕೆ ಪೂರಕವಾಗಿದೆ.

ಪ್ರಮುಖ ಹಿಂದಿ ಪತ್ರಿಕೆಯೊಂದರ ಪತ್ರಕರ್ತ ರಾಜದೇವ್‌ ಅವರನ್ನು ಕಳೆದ ವರ್ಷ ಸಿವಾನ್‌ನಲ್ಲಿ ಕೊಲೆ ಮಾಡಿದ ಆರೋಪ ಶಹಾಬುದ್ದೀನ್‌ ಹಾಗೂ ಅವರ ಪತ್ನಿ ಎದುರಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.