ADVERTISEMENT

ಷೇರು ಮರುಖರೀದಿಗೆ ಇನ್ಫೊಸಿಸ್ ಒಪ್ಪಿಗೆ

ಪಿಟಿಐ
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST
ಷೇರು ಮರುಖರೀದಿಗೆ ಇನ್ಫೊಸಿಸ್ ಒಪ್ಪಿಗೆ
ಷೇರು ಮರುಖರೀದಿಗೆ ಇನ್ಫೊಸಿಸ್ ಒಪ್ಪಿಗೆ   

ನವದೆಹಲಿ: ₹13 ಸಾವಿರ ಕೋಟಿ ಮೌಲ್ಯದ ಷೇರು ಮರುಖರೀದಿಗೆ ಇನ್ಫೊಸಿಸ್ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.

ದೇಶದ 2ನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆ ತನ್ನ 36 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಷೇರು ಮರು ಖರೀದಿಗೆ ಮುಂದಾಗಿದೆ. ಮರು ಖರೀದಿ ದಿನಾಂಕ ಮತ್ತು ಇತರೆ ಮಾಹಿತಿಗಳನ್ನು ಶೀಘ್ರವೇ ಘೋಷಣೆ ಮಾಡಲಾಗುವುದು ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚುವರಿ ಹಣವನ್ನು ಷೇರುದಾರರಿಗೆ ಮರಳಿಸುವಂತೆ ಸಂಸ್ಥೆಯ ಸಹ ಸ್ಥಾಪಕರು ಮತ್ತು ಮಾಜಿ ಉನ್ನತ ಅಧಿಕಾರಿಗಳು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು.ಹೀಗಾಗಿ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.

ಷೇರು ಮರುಖರೀದಿ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಏಳು ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗಿದೆ. ಸಹ ಅಧ್ಯಕ್ಷ ರವಿ ವೆಂಕಟೇಶನ್‌, ಕಾರ್ಯಕಾರಿ ಉಪಾಧ್ಯಕ್ಷ ವಿಶಾಲ್‌ ಸಿಕ್ಕಾ, ಹಂಗಾಮಿ ಸಿಇಒ ಯು.ಬಿ ಪ್ರವೀಣ್‌ ರಾವ್‌, ಸಿಎಫ್‌ಒ ಎಂ.ಡಿ ರಂಗನಾಥ್, ಡೆಪ್ಯುಟಿ ಸಿಎಫ್‌ಒ ಜಯೇಶ್‌ ಸಂಘರಾಜೆ, ಜನರಲ್ ಕಾನ್ಸೆಲ್‌ ಇಂದ್ರಪ್ರೀತ್‌ ಸಾವ್ನೆ ಮತ್ತು ಕಾರ್ಯದರ್ಶಿ ಎ.ಜಿ.ಎಸ್‌. ಮಣಿಕಂಠ ಅವರು ಸಮಿತಿಯಲ್ಲಿರುವ ಸದಸ್ಯರಾಗಿದ್ದಾರೆ.

ದೇಶದ 2ನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಏಪ್ರಿಲ್‌ನಲ್ಲಿ ₹16 ಸಾವಿರ ಕೋಟಿ ಮೌಲ್ಯದ ಷೇರು ಮರು ಖರೀದಿ ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.