ADVERTISEMENT

ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2014, 19:30 IST
Last Updated 22 ಜೂನ್ 2014, 19:30 IST

ಡಿಆರ್‌ಡಿಒ ಅಧಿಕಾರಿಗೆ ಇರಿತ
ಹೈದರಾಬಾದ್‌ (ಪಿಟಿಐ):
ಜೇಬುಗಳ್ಳ ಬಾಲಕನೊಬ್ಬ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್‌ ಡಿಒ) ಹಿರಿಯ ಅಧಿಕಾರಿ ಯೊಬ್ಬರಿಗೆ ಇರಿದ  ಘಟನೆ ಚಾರ್‌ ಮಿನಾರ್‌ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಗಾಯಗೊಂಡ ಕೋರಾಪುಟ್‌ ಮೂಲದ ಡಿಆರ್‌ಡಿಒ ಪ್ರಾದೇಶಿಕ ನಿರ್ದೇಶಕ ಆರ್‌.ಕೆ. ಸತ್ಯಪತಿ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿ ಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಸತ್ಯಪತಿ ಅವರು ಚಾರ್‌ಮಿನಾರ್‌ ಪ್ರದೇಶದಲ್ಲಿ ವಸ್ತು ಖರೀದಿಗೆ ಆಗಮಿಸಿದ್ದರು. ಆಗ ಚಾಕು ಹಿಡಿದು ಬಂದ ಬಾಲಕ ಇರಿದು ಪರಾರಿಯಾದ’ ಎಂದು ಚಾರ್‌ಮಿನಾರ್‌ ಠಾಣೆಯ ಎಸಿಪಿ ಡಿ. ವೆಂಕಟ್‌ನರಸಯ್ಯ ಅವರು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣವೇ ಬಾಲಕನನ್ನು  ಜನರು ಹಿಡಿದು ಥಳಿಸಿದರು. ಅವರಿಂದ ತಪ್ಪಿಸಿಕೊಂಡು ಬಾಲಕ ಪರಾರಿಯಾಗಿದ್ದಾನೆ.

ಆಂಧ್ರ: ಅಪಹೃತರ ಸುಳಿವಿಲ್ಲ
ಗುವಾಹಟಿ (ಪಿಟಿಐ):
ನಿರಂತರ ಶೋಧ ಕಾರ್ಯಾಚರಣೆಯ ನಂತರವೂ ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಿಂದ ಅಪಹರಣಕ್ಕೊಳಗಾಗಿರುವ ಆಂಧ್ರ ಮೂಲದ ವ್ಯಕ್ತಿಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಪೊಲಿಸರು ಭಾನುವಾರ ತಿಳಿಸಿದ್ದಾರೆ.

ಅಸ್ಸಾಂನ ಹೆದ್ದಾರಿ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಗಮಲ್ಲೇಶ್ವರ ರಾವ್‌ ಅವರನ್ನು 16ರಂದು ಅಪಹರಿಸಲಾಗಿತ್ತು. ಇದು ಭಯೋತ್ಪಾದಕರ ಕೃತ್ಯ ಅಲ್ಲ. ಸ್ಥಳೀಯ ದುಷ್ಕರ್ಮಿಗಳು ರಾವ್‌ ಅವರನ್ನು ಅಪಹರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒತ್ತೆ ಹಣಕ್ಕೆ ಬೇಡಿಕೆ ಬಂದಿದೆ ಎಂಬುದು ಖಚಿತವಾಗಿಲ್ಲ. ಒಂದು ಕೋಟಿ ರೂ. ಒತ್ತೆ ಹಣ ನೀಡಬೇಕು ಎಂದು ಅಪಹರಣಕಾರರು ಬೇಡಿಕೆ ಇರಿಸಿದ್ದಾರೆ ಎಂದು ಕೆಲವು ಸ್ಥಳೀಯರು ಹೇಳಿದ್ದಾರೆ. ಇದನ್ನು ಖಚಿತಪಡಿಸಿಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಯಿ ಮೇಲೆ ಅತ್ಯಾಚಾರ: ಬಂಧನ
ಕೊಟ್ಟಾಯಂ (ಐಎಎನ್‌ಎಸ್‌):
ತನ್ನ ತಾಯಿಯ ಮೇಲೆಯೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಈ ಸಂಬಂಧ ಆಗಾಗ ಗಲಾಟೆ ನಡೆಯುತ್ತಿತ್ತು. ಇದರಿಂದ ಅಸಮಾಧಾನಗೊಂಡಿದ್ದ ನೆರೆಯವರು ಶನಿವಾರ ದೂರು ನೀಡಿದ್ದರು ಎಂದು ಪಾಲಾ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕೂಲಿ ಕಾರ್ಮಿಕನಾಗಿ ಕೆಲಸ ಮಾಡುವ ಈ ಕುಟುಂಬದ ಯಜಮಾನ ಮದ್ಯವ್ಯಸನಿ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯು ತಪ್ಪೊಪ್ಪಿ ಕೊಂಡಿದ್ದಾನೆ.

ಮಹಿಳೆ ಅತ್ಯಾಚಾರ–ದರೋಡೆ
ಸಂಭಾಲ್‌ (ಪಿಟಿಐ):
ಮೂವರ ಗುಂಪು 55 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ನಂತರ ಆಕೆಯ ಬಳಿ ಇದ್ದ ವಸ್ತುಗಳನ್ನು ದೋಚಿದ ಘಟನೆ ಪಂಜಾಬ್‌ನ ರಾಜಪುರದಲ್ಲಿ ಭಾನುವಾರ ನಡೆದಿದೆ. ‘ಅತ್ಯಾಚಾರ ಎಸಗಿದ ಸೋಮವೀರ, ಹರಿಬಾಬು ಹಾಗೂ ಕೃಷ್ಣನ್‌ ಅವರನ್ನು ಬಂಧಿಸಲಾಗಿದೆ’ ಎಂದು ರಾಜಪುರ ಠಾಣೆ ಯಾದವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.