ADVERTISEMENT

ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್‌ 3 ರೂ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 10:03 IST
Last Updated 29 ಅಕ್ಟೋಬರ್ 2014, 10:03 IST

ನವದೆಹಲಿ (ಪಿಟಿಐ): ಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್‌ಪಿಜಿ) ದರ ಪ್ರತಿ ಸಿಲಿಂಡರ್‌ಗೆ ಮೂರು ರೂಪಾಯಿ ಏರಿಕೆಯಾಗಿದೆ.

ಅನಿಲ ವಿತರಕರಿಗೆ ನೀಡಲಾಗುವ ಕಮಿಷನ್‌ ಅನ್ನು ಸರ್ಕಾರ ಹೆಚ್ಚಿಸಿರುವ ಫಲವಾಗಿ ದರ ಹೆಚ್ಚಳಗೊಂಡಿದೆ. ದರ ಏರಿಕೆ ಅಕ್ಟೋಬರ್‌ 23ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬಂದಿದೆ.

ವಿತರಕರಿಗೆ ನೀಡಲಾಗುವ ಕಮಿಷನ್‌ ಅನ್ನು ಸರ್ಕಾರವು ಕಳೆದ ವಾರ 14.2 ಕೆ.ಜಿಯ ಪ್ರತಿ ಸಿಲಿಂಡರ್‌ಗೆ ಮೂರು ರೂಪಾಯಿ ಹೆಚ್ಚಿಸಿತ್ತು. ಇದರಿಂದ ವಿತರಕರಿಗೆ ದೊರೆಯುವ ಕಮಿಷನ್‌ 40.71 ರೂಪಾಯಿಯಿಂದ 43.71 ರೂಪಾಯಿಗೆ ಹೆಚ್ಚಿದೆ.

ADVERTISEMENT

ವಿತರಕರಿಗೆ ಕಮಿಷನ್ ಹೆಚ್ಚಿದ ಪ್ರಮಾಣದಲ್ಲಿಯೇ ಗ್ರಾಹಕರಿಗೆ ದೊರೆಯುವ ಸಬ್ಸಿಡಿ ಸಿಲಿಂಡರ್‌ ದರವೂ ಏರಿಕೆಯಾಗಿದೆ ಎಂದು ಮೂಲಗಳು ಹೇಳಿವೆ.

 ಈ ಮೊದಲು 2013ರ ಡಿಸೆಂಬರ್‌ನಲ್ಲಿ ಅನಿಲ ವಿತರಕರಿಗೆ ಕಮಿಷನ್ ಏರಿಕೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.