ADVERTISEMENT

ಸರಕು ಮತ್ತು ಸೇವಾ ತೆರಿಗೆ ವಿಧೇಯಕ: ಲೋಕಸಭೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 6 ಮೇ 2015, 10:02 IST
Last Updated 6 ಮೇ 2015, 10:02 IST

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ  ಸರಕು ಮತ್ತು ಸೇವಾ ತೆರಿಗೆ ವಿಧೇಯಕಕ್ಕೆ ಬುಧವಾರ ಲೋಕಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ಮಂಗಳವಾರ ಈ ವಿಧೇಯಕವನ್ನು ವಿತ್ತ ಸಚಿವ ಅರುಣ್‌ ಜೇಟ್ಲಿ ಮಂಡಣೆ ಮಾಡಿದ್ದರು.
ಇಂದು ಈ ವಿಧೇಯಕ ಕುರಿತಂತೆ ನಡೆದ ಮತದಾನದಲ್ಲಿ ಪರವಾಗಿ 336 ಮತ್ತು ವಿರೊಧವಾಗಿ 10 ಮತಗಳು ಬಿದ್ದವು. 10 ಜನ ಸಂಸದರು ಗೈರು ಹಾಜರಾಗಿದ್ದರು. ಕಾಂಗ್ರೆಸ್‌ ಪಕ್ಷ ಮತದಾನದಿಂದ ಹೊರಗುಳಿದಿತ್ತು.

ಮತದಾನದ ಬಳಿಕ ಲೋಕಸಭಾಧ್ಯಕ್ಷರು  ಸರಕು ಮತ್ತು ಸೇವಾ ತೆರಿಗೆ ವಿಧೇಯಕಕ್ಕೆ  ಲೋಕಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಘೋಷಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.