ADVERTISEMENT

ಸರ್ವೀಸ್ ರೈಫಲ್‍ಗಳನ್ನು ತೆಗೆದುಕೊಂಡು ಓಡಿ ಹೋಗಿದ್ದ ಪೊಲೀಸ್ ಪೇದೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರ್ಪಡೆ

ಐಎಎನ್ಎಸ್
Published 22 ಮೇ 2017, 18:23 IST
Last Updated 22 ಮೇ 2017, 18:23 IST
ಸಾಂದರ್ಭಿಕ ಚಿತ್ರ ಕೃಪೆ: ರಾಯಿಟರ್ಸ್
ಸಾಂದರ್ಭಿಕ ಚಿತ್ರ ಕೃಪೆ: ರಾಯಿಟರ್ಸ್   

ಶ್ರೀನಗರ: ಜಮ್ಮು ಕಾಶ್ಮೀರದ ಬುದ್‍ಗಾಂ ಜಿಲ್ಲೆಯಲ್ಲಿ ನಾಲ್ಕು ಸರ್ವೀಸ್ ರೈಫಲ್‍ಗಳನ್ನು ತೆಗೆದುಕೊಂಡು ಓಡಿ ಹೋಗಿದ್ದ  ಪೊಲೀಸ್ ಪೇದೆಯೊಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿರುವುದಾಗಿ ಗುಪ್ತಚರ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶನಿವಾರ ಸಯೀದ್ ನವೀದ್ ಮುಷ್ತಾಕ್ ಎಂಬ ಪೊಲೀಸ್ ಪೇದೆ  ಭಾರತೀಯ ಆಹಾರ ನಿಗಮ (ಎಫ್‍ಸಿಐ) ವೇರ್ ಹೌಸ್‍ನಿಂದ ನಾಲ್ಕು ಸರ್ವೀಸ್ ರೈಫಲ್‍ಗಳನ್ನು ತೆಗೆದುಕೊಂಡು ಓಡಿಹೋಗಿದ್ದಾರೆ.

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ನಜ್ನೀನ್‍ಪೊರ ಗ್ರಾಮದ ನಿವಾಸಿಯಾದ ಮುಷ್ತಾಕ್  2012ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು.

ADVERTISEMENT

ಮುಷ್ತಾಕ್ ಅವರು ಹಿಬ್ಜುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿರುವ ಬಗ್ಗೆ ಹಿಬ್ಜುಲ್ ಸಂಘಟನೆಯ ವಕ್ತಾರ ಬುರ್ಹಾನ್ ಉದ್ ದಿನ್ ಸ್ಥಳೀಯ ಸುದ್ದಿ ಸಂಸ್ಥೆಯೊಂದಕ್ಕೆ ಇಮೇಲ್ ಕಳುಹಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಇನ್ನಷ್ಟು ಪೊಲೀಸರು ನಮ್ಮ ಸಂಘಟನೆಯನ್ನು ಸೇರುವ ನಿರೀಕ್ಷೆಯಿದೆ ಎಂದು ಇಮೇಲ್‍ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.