ADVERTISEMENT

ಸಹೋದ್ಯೋಗಿ ಕೊಲೆ ಮಾಡಿ ಶವ ಫ್ರಿಡ್ಜ್‌ನಲ್ಲಿಟ್ಟ ಆರೋಪಿ ಬಂಧನ

ಪಿಟಿಐ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST

ನವದೆಹಲಿ: ಸಹೋದ್ಯೋಗಿ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದಾಗಿ ಆತನನ್ನು ಕೊಲೆ ಮಾಡಿ, ದೇಹವನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಬಚ್ಚಿಟ್ಟ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ.

ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಬಾದಲ್ ಮಂಡಲ್ ಅಲಿಯಾಸ್ ಸ್ವಪನ್ ಸಿಂಗ್ರಾ ಎಂಬ ವ್ಯಕ್ತಿ ಸಹೋದ್ಯೋಗಿ ವಿಪಿನ್ ಜೋಶಿ ಎಂಬಾತನನ್ನು ಮಾಂಸ ಕತ್ತರಿಸುವ ಚಾಕುವಿನಿಂದ ತಲೆಗೆ ಇರಿದು, ಆತನ ದೇಹವನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಅಕ್ಟೋಬರ್ 9 ರಿಂದ ಜೋಶಿ ಕಾಣೆಯಾಗಿದ್ದರು. ಅಕ್ಟೋಬರ್ 15ರಂದು ಅವರ ಮೃತ ದೇಹ  ಪತ್ತೆಯಾಗಿದೆ. ಮೂರು ದಿನಗಳ ನಂತರ ಬಾದಲ್ ಒಡಿಸಾದ ರೂರ್ಕೆಲಾದಲ್ಲಿ ಇರುವ ಕುರಿತು ಜೋಶಿಯ ಸಂಬಂಧಿಕರು ನೀಡಿದ ಮಾಹಿತಿಯ ಆಧಾರದ ಮೇಲೆ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ವಿಚಾರಣೆ ವೇಳೆ ಅನೈತಿಕ ಸಂಬಧದ ಕುರಿತು ಮಾಹಿತಿ ನೀಡಿರುವ ಬಾದಲ್, ತಾನು ಮನೆಯಲ್ಲಿ ಇರದ ವೇಳೆ ಜೋಶಿ ನನ್ನ ಪತ್ನಿಯನ್ನು ಭೇಟಿಯಾಗಲು ಹೋಗುತ್ತಿದ್ದ. ಇದರಿಂದ ಅವರಿಬ್ಬರ ಮಧ್ಯೆ ಅನೈತಿಕ ಸಂಬಂಧ ಇರುವ ಶಂಕೆ ಮೂಡಿತು. ನಂತರ ಜೋಶಿಯನ್ನು ಕೊಲೆ ಮಾಡುವ ಯೋಚನೆ ಮಾಡಿದೆ ಎಂದಿದ್ದಾನೆ.

ತಾನು ಕೊಲೆ ಮಾಡಿದ್ದು ಯಾರಿಗೂ ಅನುಮಾನ ಬಾರದಿರಲೆಂದು ಕೆಲಸದಿಂದ ರಜೆ ಪಡೆದಿದ್ದ ಬಾದಲ್, ಜೋಶಿಯನ್ನು ಕೊಲ್ಲುವ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.