ADVERTISEMENT

ಸಾರ್ಕ್ ಶೃಂಗಸಭೆ: ಬಾಂಗ್ಲಾದೇಶ, ಭೂತಾನ, ಅಫ್ಘಾನಿಸ್ತಾನವೂ ಭಾಗವಹಿಸಲ್ಲ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 6:18 IST
Last Updated 28 ಸೆಪ್ಟೆಂಬರ್ 2016, 6:18 IST
ಸಾರ್ಕ್ ಶೃಂಗಸಭೆ: ಬಾಂಗ್ಲಾದೇಶ, ಭೂತಾನ, ಅಫ್ಘಾನಿಸ್ತಾನವೂ ಭಾಗವಹಿಸಲ್ಲ
ಸಾರ್ಕ್ ಶೃಂಗಸಭೆ: ಬಾಂಗ್ಲಾದೇಶ, ಭೂತಾನ, ಅಫ್ಘಾನಿಸ್ತಾನವೂ ಭಾಗವಹಿಸಲ್ಲ   

ನವದೆಹಲಿ: ಇಸ್ಲಾಮಾಬಾದ್‌ ನಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಸಾರ್ಕ್‌ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವುದಿಲ್ಲ ಎಂಬ ನಿರ್ಧಾರ ಕೈಗೊಂಡ ಬೆನ್ನಲ್ಲೇ ಬಾಂಗ್ಲಾದೇಶ, ಭೂತಾನ್ ಮತ್ತು ಅಫ್ಘಾನಿಸ್ತಾನ ಕೂಡಾ ಸಾರ್ಕ್ ಶೃಂಗ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿವೆ.

ಉರಿ ಸೇನಾ ಶಿಬಿರದ ಮೇಲೆ ಪಾಕಿಸ್ತಾನ ಉಗ್ರರಿಂದ ನಡೆದ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಬಂಧ ಹದಗೆಟ್ಟಿರುವುದರಿಂದ ಭಾರತ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿತ್ತು.

ಇಸ್ಲಾಮಾಬಾದ್ ನಲ್ಲಿ ನಡೆಯುವ ಶೃಂಗ ಸಭೆಗೆ ಭಾಗವಹಿಸುವುದಿಲ್ಲ ಎಂದು ಬಾಂಗ್ಲಾದೇಶ ನೇಪಾಳಕ್ಕೆ ಪತ್ರ ಬರೆದಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.

ಸಾರ್ಕ್‌ ಶೃಂಗಸಭೆ ನಡೆಸಲು ಯೋಗ್ಯವಾದ ಪರಿಸರವನ್ನು ಪಾಕ್‌ ಹೊಂದಿಲ್ಲ ಆದ್ದರಿಂದ ಪ್ರಸ್ತುತ ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಭೂತಾನ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಅಭಿಪ್ರಾಯ ಪಟ್ಟಿರುವುದಾಗಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.