ADVERTISEMENT

ಸಾಲ ಮರುಪಾವತಿ ಸಾಮರ್ಥ್ಯ ಮೇಲ್ದರ್ಜೆಗೆ

ಪಿಟಿಐ
Published 17 ನವೆಂಬರ್ 2017, 20:23 IST
Last Updated 17 ನವೆಂಬರ್ 2017, 20:23 IST
ಸಾಲ ಮರುಪಾವತಿ ಸಾಮರ್ಥ್ಯ ಮೇಲ್ದರ್ಜೆಗೆ
ಸಾಲ ಮರುಪಾವತಿ ಸಾಮರ್ಥ್ಯ ಮೇಲ್ದರ್ಜೆಗೆ   

ನವದೆಹಲಿ : ಭಾರತದ ಹಣಕಾಸು ಮತ್ತು ಸಾಲದ ಬದ್ಧತೆ ಈಡೇರಿ ಸುವ ಸಾಮರ್ಥ್ಯವನ್ನು ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ಮೂಡಿಸ್‌ ಇನ್‌ವೆಸ್ಟರ್‌ ಸರ್ವಿಸ್‌, ಹದಿಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮೇಲ್ದರ್ಜೆಗೆ ಏರಿಸಿದೆ.

ಸಾಲ ಮರುಪಾವತಿ ಸಾಮರ್ಥ್ಯವನ್ನು ‘ಬಿಎಎ3’ಯಿಂದ ‘ಬಿಎಎ2’ಗೆ ಶ್ರೇಣಿಗೆ ಹೆಚ್ಚಿಸಿದೆ. ಇತ್ತೀಚಿನ ಆರ್ಥಿಕ ಸುಧಾರಣಾ ಕ್ರಮಗಳು ಉತ್ಪಾದನೆ ಹೆಚ್ಚಿಸಿವೆ. ದೇಶಿ ಮತ್ತು ವಿದೇಶಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಿವೆ. ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ತ್ವರಿತಗೊಳಿಸಿರುವುದರಿಂದ ಮಾನದಂಡ ಏರಿಕೆಯಾಗಿದೆ.

ಈ ಹಿಂದೆ 2004ರಲ್ಲಿ ದೇಶದ ಹಣಕಾಸು ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಿದೆ ಎನ್ನುವ ಕಾರಣಕ್ಕಾಗಿ ‘ಬಿಎಎ–3’ ಶ್ರೇಣಿ ದೊರೆತಿತ್ತು. ಇದು ಅತ್ಯಂತ ಕೆಳ ಮಟ್ಟದ ಶ್ರೇಣಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿರುವುದರಿಂದ ದೇಶದ ಆರ್ಥಿಕ ಸ್ಥಿತಿ ಮೇಲ್ದರ್ಜೆಗೆ ಏರುತ್ತಿದೆ ಎಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.