ADVERTISEMENT

ಸಿನಿಮಾ ಪ್ರಮಾಣಪತ್ರಕ್ಕೆ ಆನ್‌ಲೈನ್‌ ವ್ಯವಸ್ಥೆ

ಏಜೆನ್ಸೀಸ್
Published 27 ಮಾರ್ಚ್ 2017, 15:06 IST
Last Updated 27 ಮಾರ್ಚ್ 2017, 15:06 IST
ಸಿನಿಮಾ ಪ್ರಮಾಣಪತ್ರಕ್ಕೆ ಆನ್‌ಲೈನ್‌ ವ್ಯವಸ್ಥೆ
ಸಿನಿಮಾ ಪ್ರಮಾಣಪತ್ರಕ್ಕೆ ಆನ್‌ಲೈನ್‌ ವ್ಯವಸ್ಥೆ   

ನವದೆಹಲಿ: ಆನ್‌ಲೈನ್‌ ಮೂಲಕ ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವ ವ್ಯವಸ್ಥೆಗೆ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು  ಚಾಲನೆ ನೀಡಿದರು.

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ)ಯು ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯು ಆನ್‌ಲೈನ್‌ ವ್ಯವಸ್ಥೆ ಮೂಲಕ ಪೂರ್ಣ ಸ್ವಯಂಚಾಲಿತಗೊಳ್ಳಲಿದೆ. ಇದು ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿದೆ ಎಂದು ಸಚಿವ ವೆಂಕಯ್ಯ ನಾಯ್ಡು ಹೇಳಿದರು.

ಈ ವ್ಯವಸ್ಥೆಯಿಂದಾಗಿ ಪ್ರಮಾಣೀಕರಿಸುವ ಪ್ರಕ್ರಿಯೆ ಪಾರದರ್ಶಕವಾಗಲಿದೆ ಹಾಗೂ ಸಿಬಿಎಫ್‌ ಸಿ ಕಚೇರಿಗಳು ಕಾಗದ ಮುಕ್ತಗೊಳ್ಳಲಿದೆ. ಇದರೊಂದಿಗೆ ಅಧಿಕಾರಿಗಳು ಹಾಗೂ ಅರ್ಜಿದಾರ(ನಿರ್ಮಾಪಕ)ರ ಮೇಲೂ ನಿಗಾವಹಿಸಲು ಸಹಕಾರಿ ಎಂದರು.

ADVERTISEMENT

ಸರ್ಕಾರದ ‘ಭಾರತ್‌ಕೋಶ್‌’ ವೆಬ್‌ಸೈಟ್‌ ಮೂಲಕ ಸಿನಿಮಾ ನಿರ್ಮಾಪಕರು ಪ್ರಮಾಣಪತ್ರಕ್ಕೆ ಅಗತ್ಯವಿರುವ ಶುಲ್ಕವನ್ನು ಪಾವತಿಸಬಹುದಾಗಿದೆ.

ಪ್ರಮುಖಾಂಶಗಳು:
* ‘ಇ–ಸಿನಿಪ್ರಮಾಣ್‌’ನಲ್ಲಿ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ತಿಳಿಯಬಹುದು
* 10 ನಿಮಿಷಕ್ಕಿಂತ ಕಡಿಮೆ ಇರುವ ಕಿರುಚಿತ್ರ/ಪ್ರೋಮೋ/ಟ್ರೇಲರ್‌ಗಳನ್ನು ಪ್ರಮಾಣಿಕರಿಸಲು ನಿರ್ಮಾಪಕರು ಕಚೇರಿಗೆ ಹೋಗುವ ಅವಶ್ಯಕತೆಯೂ ಇರುವುದಿಲ್ಲ. ನೇರವಾಗಿ ಆನ್‌ಲೈನ್‌ ಮೂಲಕವೇ ಸಲ್ಲಿಸಲು ಅವಕಾಶವಿದೆ.
* 10 ನಿಮಿಷಕ್ಕಿಂತ ಹೆಚ್ಚು ಅವಧಿಯ ಚಿತ್ರಗಳನ್ನು ಪರಿಶೀಲನಾ ಪ್ರದರ್ಶನ ಕೇಂದ್ರದಲ್ಲಿ ಪ್ರದರ್ಶಿಸಬೇಕು ಹಾಗೂ ಪ್ರಮಾಣಪತ್ರ ನೀಡುವ ಸಮಯದಲ್ಲಷ್ಟೇ ಕಚೇರಿಯನ್ನು ಸಂಪರ್ಕಿಸಬೇಕು
* ಪ್ರಮಾಣಪತ್ರಕ್ಕೆ ಸಲ್ಲಿಕೆಯಾಗಿರುವ ಅರ್ಜಿ ಕುರಿತು ಪ್ರತಿ ಹಂತದ ಮಾಹಿತಿ ಎಸ್‌ಎಂಎಸ್‌ ಅಥವಾ ಇ–ಮೇಲ್‌ ಮೂಲಕ ತಲುಪಿಸಲಾಗುತ್ತದೆ
* ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಮಧ್ಯವರ್ತಿಗಳನ್ನು ದೂರ ಇಡಲು ಸಾಧ್ಯ
* ‘ಕ್ಯುಆರ್‌ ಕೋಡ್‌’ ಮುದ್ರಿಸುವುದರಿಂದ ಸುಳ್ಳು ಪ್ರಮಾಣಪತ್ರ ಸೃಷ್ಟಿಸುವುದನ್ನು ತಪ್ಪಿಸಬಹುದು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.