ADVERTISEMENT

ಸುಬ್ರತೊ ಗೃಹ ಬಂಧನ ಕೋರಿಕೆ ತಿರಸ್ಕರಿಸಿದ ಸುಪ್ರೀಂಕೋರ್ಟ್‌

​ಪ್ರಜಾವಾಣಿ ವಾರ್ತೆ
Published 19 ಮೇ 2014, 19:30 IST
Last Updated 19 ಮೇ 2014, 19:30 IST

ನವದೆಹಲಿ (ಪಿಟಿಐ): ಲಖನೌದಲ್ಲಿ ಗೃಹ ಬಂಧನದಲ್ಲಿ ಇಡಬೇಕು ಎಂಬ ಸಹರಾ ಸಮೂಹ ಕಂಪೆನಿಯ ಮುಖ್ಯಸ್ಥ ಸುಬ್ರತೊ ರಾಯ್ ಅವರ ಕೋರಿಕೆಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ಜಾಮೀನಿಗೆ ಅಗತ್ಯವಾದ ಹತ್ತು ಸಾವಿರ ಕೋಟಿ ಭದ್ರತಾ ಠೇವಣಿ ಇಡುವ ಬಗ್ಗೆ ತಾರ್ಕಿಕ ಮತ್ತು ಸಮ್ಮತವಾಗುವ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದೆ.

ನ್ಯಾಯಮೂರ್ತಿ ಜೆ. ಎಸ್‌. ಖೇಹರ್ ಅವರು ವಿಚಾರಣೆಯಿಂದ ಹಿಂದೆ ಸರಿದ ನಂತರ ನ್ಯಾಯಮೂರ್ತಿ ಟಿ. ಎಸ್. ಠಾಕೂರ್ ಮತ್ತು ಎ. ಕೆ. ಸಿಕ್ರಿ ಅವರನ್ನು ಒಳ­ಗೊಂಡ ಹೊಸ ಪೀಠವನ್ನು ರಚಿಸಲಾಗಿದ್ದು, ಸೂಕ್ತ ಪ್ರಸ್ತಾವನೆ ಸಲ್ಲಿಸದಿದ್ದರೆ ಬಿಕ್ಕಟ್ಟು ಪರಿಹಾರವಾಗುವುದಿಲ್ಲ ಹಾಗೂ ಇದರಿಂದ ಯಾರಿಗೂ ಪ್ರಯೋಜನ ಆಗುವುದಿಲ್ಲ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.