ADVERTISEMENT

ಸೂಪರ್‌ಸಾನಿಕ್ ಬ್ರಹ್ಮೋಸ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಏಜೆನ್ಸೀಸ್
Published 22 ಮಾರ್ಚ್ 2018, 9:53 IST
Last Updated 22 ಮಾರ್ಚ್ 2018, 9:53 IST
ಸೂಪರ್‌ಸಾನಿಕ್ ಬ್ರಹ್ಮೋಸ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿ
ಸೂಪರ್‌ಸಾನಿಕ್ ಬ್ರಹ್ಮೋಸ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿ   

ಪೊಕ್ರಾನ್‌/ರಾಜಸ್ತಾನ: ಸೂಪರ್‌ಸಾನಿಕ್ (ಶಬ್ದಾತೀತ) ಬ್ರಹ್ಮೋಸ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ರಾಜಸ್ತಾನದ ಪೊಕ್ರಾನ್‌ನಲ್ಲಿ  ಗುರುವಾರ ಬೆಳಿಗ್ಗೆ 8.42ಕ್ಕೆ ಯಶಸ್ವಿಯಾಗಿ ನಡೆದಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಈ ಸಾಧನೆಗೆ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇದರಿಂದ ರಾಷ್ಟ್ರದ ರಕ್ಷಣಾ ಸಾಮರ್ಥ್ಯ ಮತ್ತಷ್ಟು ವೃದ್ಧಿಸಲಿದೆ ಎಂದು ಹೇಳಿದ್ದಾರೆ.

ಸ್ವದೇಶಿ ನಿರ್ಮಿತ ಪರೀಕ್ಷಾರ್ಥ ಕ್ಷಿಪಣಿಯು ಗೊತ್ತುಪಡಿಸಿದ ಪಥಕ್ಕೆ ಸರಿಯಾಗಿ ತಲುಪಿದೆ. ಅಲ್ಲದೇ ನಿಖರವಾದ ಗುರಿ ಮುಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.