ADVERTISEMENT

ಸೇವಾ ಪುಸ್ತಕದಲ್ಲಿ ಆಧಾರ್‌ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2014, 19:30 IST
Last Updated 3 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ):  ಕೇಂದ್ರ ಸರ್ಕಾರಿ ನೌಕರರು ಇನ್ನು ಮುಂದೆ ತಮ್ಮ  ಸೇವಾ ಪುಸ್ತಕದಲ್ಲಿ  ‘ಆಧಾರ್‌’  ಸಂಖ್ಯೆ ನಮೂದಿಸುವುದು ಕಡ್ಡಾಯ.

ಕೇಂದ್ರ ಸರ್ಕಾರ ಈ ಕುರಿತು ಸೋಮವಾರ ಆದೇಶ ಹೊರಡಿಸಿದ್ದು,  ಈಗಾಗಲೇ ಎಲ್ಲ ಇಲಾಖೆಗಳಿಗೂ ಪತ್ರವನ್ನೂ  ಬರೆದಿದೆ.
ಆಧಾರ್‌ ಸಂಖ್ಯೆಯ ಪ್ರತ್ಯೇಕ ಕಾಲಂ ಒಳಗೊಂಡ ಹೊಸ ಸೇವಾ ಪುಸ್ತಕಗಳನ್ನು ಈಗಾಗಲೇ ಎಲ್ಲ ಇಲಾಖೆಗಳಿಗೆ ಪೂರೈಸಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ತಿಳಿಸಿದೆ. 

ನಿವೃತ್ತಿಯ ನಂತರ ಪಿಂಚಣಿ ಸೇರಿದಂತೆ ಸರ್ಕಾರದಿಂದ ಇನ್ನಿತರ ಸೌಲಭ್ಯ ಪಡೆಯಲು 12 ಅಂಕಿಗಳ ಆಧಾರ್‌ ಸಂಖ್ಯೆ ನೆರವಾಗಲಿದೆ.
ಇಲ್ಲಿಯವರೆಗೆ ಸೇವಾ ಪುಸ್ತಕ ನೌಕರರ ವಿದ್ಯಾರ್ಹತೆ, ಹುದ್ದೆ, ಸೇವಾವಧಿ, ವಿಳಾಸ ಸೇರಿದಂತೆ ವ್ಯಕ್ತಿಗತ ವಿವರಗಳನ್ನು ಮಾತ್ರ ಒಳಗೊಂಡಿತ್ತು.  ಇನ್ನು ಮುಂದೆ 12 ಅಂಕಿಗಳ ‘ಆಧಾರ್‘ ಸಂಖ್ಯೆ ಕೂಡ ಸೇವಾ ಪುಸ್ತಕ ಸೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.