ADVERTISEMENT

ಸೋನಿಯಾ, ರಾಹುಲ್‌ ರಾಜೀನಾಮೆ ಒಪ್ಪದ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 19 ಮೇ 2014, 19:30 IST
Last Updated 19 ಮೇ 2014, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಕಾಂಗ್ರೆಸ್‌್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌್ ಗಾಂಧಿ ಅವರು ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಹೊಣೆ ಹೊತ್ತು ರಾಜೀನಾಮೆ ನೀಡಲು ನಿರ್ಧರಿಸಿದ್ದನ್ನು ಕಾಂಗ್ರೆಸ್‌್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಒಮ್ಮತದಿಂದ ತಿರಸ್ಕರಿಸಿದೆ.

ಸೋಮವಾರ ಇಲ್ಲಿ ನಡೆದ ಸಿಡಬ್ಲುಸಿ  ಸಭೆಯಲ್ಲಿ ರಾಹುಲ್‌್ ಹಾಗೂ ಸೋನಿಯಾ ರಾಜೀನಾಮೆ ಕೊಡಲು ಮುಂದಾದರು. ಆದರೆ ಸಿಡಬ್ಲ್ಯುಸಿ ಅದನ್ನು ಒಪ್ಪಲಿಲ್ಲ’ ಎಂದು ಪಕ್ಷದ ಹಿರಿಯ ಮುಖಂಡ ಅಮರಿಂದರ್‌್ ಸಿಂಗ್‌್ ಹೇಳಿದರು. ‘ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಅಗತ್ಯ ಬದಲಾವಣೆ  ತರಲು ನನಗೆ ಸಾಧ್ಯವಾಗಿಲ್ಲ. ಲೋಕ­ಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆ­ಯನ್ನು ಸಂಪೂರ್ಣವಾಗಿ ನಾನೇ ಹೊರು­ತ್ತೇನೆ. ನನ್ನ ಸ್ಥಾನ ತ್ಯಜಿಸುವುದಕ್ಕೆ ಸಿದ್ಧನಾಗಿದ್ದೇನೆ’ ಎಂದು ಸೋನಿಯಾ ಹೇಳಿದರು. 

‘ಪಕ್ಷದ ಮುಖಂಡರ ನಿರೀಕ್ಷೆಗಳನ್ನು ಈಡೇರಿ­ಸಲು ನನ್ನಿಂದ ಸಾಧ್ಯವಾಗಿಲ್ಲ. ಹಾಗಾಗಿ ರಾಜೀ­ನಾಮೆ ನೀಡುತ್ತಿದ್ದೇನೆ’ ಎಂದು ರಾಹುಲ್‌್ ತಿಳಿಸಿ­ದರು. ಆದರೆ   ಈ ನಿರ್ಧಾರದಿಂದ ಹಿಂದೆ ಸರಿಯು­ವಂತೆ ಸಭೆಯಲ್ಲಿ ಅಮ್ಮ–ಮಗನ ಮೇಲೆ ಒತ್ತಡ ಹಾಕಲಾಯಿತು.
‘ರಾಜೀನಾಮೆ ನೀಡುವುದೇ ಸಮಸ್ಯೆಗೆ  ಪರಿ­ಹಾರ­ವಲ್ಲ’ ಎಂದು ಮನವರಿಕೆ ಮಾಡಿಕೊಡ­ಲಾಯಿತು.

ಮನಮೋಹನ್‌್ ಸಿಂಗ್‌್ ಕೂಡ ಇದೇ ರೀತಿ ಅಭಿ­ಪ್ರಾಯಪಟ್ಟಿದ್ದಾಗಿ ಪಕ್ಷದ ಮೂಲಗಳು ತಿಳಿಸಿವೆ. ‘ಸೋನಿಯಾ ಹಾಗೂ ರಾಹುಲ್‌್ ನಾಯ­ಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ’ ಎಂದು ಸಭೆ­ಯಲ್ಲಿ ಒಮ್ಮತದ ನಿರ್ಣಯ ಅಂಗೀಕರಿಸ­ಲಾಯಿತು. ‘ಪಕ್ಷವನ್ನು ಪುನರ್‌ರಚಿಸುವುದಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ  ಸೋನಿಯಾ ಅವರಿಗೆ ಸಂಪೂರ್ಣ ಅಧಿಕಾರ ನೀಡುವುದಕ್ಕೂ ಸಭೆ ಅನುಮೋದನೆ ನೀಡಿತು’ ಎಂದು ಪಕ್ಷದ ಮುಖಂಡ ಜನಾರ್ದನ ದ್ವಿವೇದಿ ಸುದ್ದಿಗಾರರಿಗೆ ತಿಳಿಸಿದರು.

ಸರ್ಕಾರದ ಮಟ್ಟದಲ್ಲಿನ ನ್ಯೂನತೆಗೆ ತಾವೇ ಹೊಣೆ ಹೊರುವುದಾಗಿ ಮನಮೋಹನ್‌್ ಸಿಂಗ್‌್ ಹೇಳಿದ್ದಾಗಿಯೂ ದ್ವಿವೇದಿ ತಿಳಿಸಿದರು.
‘ಪಕ್ಷವು ಜನರೊಂದಿಗೆ ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗಲಿಲ್ಲ. ಪಕ್ಷ ಸಂಘಟನೆಗೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ರಾಹುಲ್‌್ ಅವರಿಗೆ ಇನ್ನಷ್ಟು ಮುಕ್ತ ಅಧಿಕಾರ  ನೀಡುವ ಸಾಧ್ಯತೆ ಇದೆ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

‘ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾವು ಹೋರಾಟ ಮಾಡುತ್ತೇವೆ’ ಎಂದು ಪಕ್ಷದ ಮುಖಂಡ ಆಸ್ಕರ್‌್ ಫರ್ನಾಂಡಿಸ್‌್ ಹೇಳಿದ್ದಾರೆ.
‘ರಾಜೀನಾಮೆ ನಮ್ಮ ಮುಂದಿರುವ ಮಾರ್ಗ­ವಲ್ಲ’ ಎಂದು ಮನೀಷ್‌ ತಿವಾರಿ ಕೂಡ ಅಭಿಪ್ರಾಯ­ಪಟ್ಟಿದ್ದಾರೆ.‘ಪಕ್ಷದ ಸೋಲಿಗೆ ನಾನೂ ಸೇರಿ ಎಲ್ಲರೂ ಹೊಣೆ­ಗಾರರು. ಹೀಗಿರುವಾಗ    ಕೇವಲ ಒಬ್ಬರ ಮೇಲೆ ಗೂಬೆ ಕೂರಿಸುವುದಕ್ಕೆ ಹೇಗೆ ಸಾಧ್ಯ’ ಎಂದು ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯ­ದರ್ಶಿ ಅಹ್ಮದ್‌ ಪಟೇಲ್‌್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.