ADVERTISEMENT

ಸೋಮವಾರ ಮಹಾರಾಷ್ಟ್ರ ಬಿಎಲ್‌ಪಿ ಸಭೆ?

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 10:48 IST
Last Updated 24 ಅಕ್ಟೋಬರ್ 2014, 10:48 IST

ಮುಂಬೈ (ಪಿಟಿಐ): ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ಸೋಮವಾರ ನಡೆಯುವ ಸಾಧ್ಯತೆಗಳಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಯ ಪ್ರಕ್ರಿಯೆ ವೇಗ ಪಡೆಯುವ ನಿರೀಕ್ಷೆಗಳಿವೆ.

‘ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ಸೋಮವಾರ ನಡೆಯುವ ಸಾಧ್ಯತೆಗಳಿವೆ’ ಎಂದು ಬಿಜೆಪಿ ಮುಖಂಡರೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಅಲ್ಲದೇ,‘ದೀಪಾವಳಿ ವೇಳೆ ಯಾವುದೇ ಬೆಳವಣಿಗೆಗಳು ಆಗಿಲ್ಲ. ಮುಂದಿನ ವಾರ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಶುಕ್ರವಾರ ಭೇಟಿ ಮಾಡಿದ್ದ ಆರ್‌ಪಿಐ ಮುಖಂಡ ರಾಮದಾಸ್‌ ಅಠಾವಲೆ, ಉದ್ಧವ್‌ ಅವರು ಬಿಜೆಪಿ ಜತೆಗೂಡಿ ಸರ್ಕಾರ ರಚಿಸಲು ‘ತುಂಬಾ ಉತ್ಸುಕ’ರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಅದಾಗ್ಯೂ, ಶಿವಸೇನೆ ಜತೆಗಿನ ಮರು ಮೈತ್ರಿಯ ಬಗ್ಗೆ ಬಿಜೆಪಿ ಇನ್ನೂ ಮೌನ ಮುರಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.