ADVERTISEMENT

ಸ್ವಿಸ್‌ ಸರ್ಕಾರದಿಂದ ಅಧಿಕೃತ ಮಾಹಿತಿ ಬಂದಿಲ್ಲ

​ಪ್ರಜಾವಾಣಿ ವಾರ್ತೆ
Published 23 ಜೂನ್ 2014, 14:16 IST
Last Updated 23 ಜೂನ್ 2014, 14:16 IST

ನವದೆಹಲಿ (ಪಿಟಿಐ): ಭಾರತೀಯರ ಕಪ್ಪು ಹಣದ ಬಗ್ಗೆ  ಸ್ವಿಟ್ಜರ್‌ಲೆಂಡ್‌ ಸರ್ಕಾರದಿಂದ ಈವರೆಗೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಸೋಮವಾರ ತಿಳಿಸಿದ್ದಾರೆ.

ಭಾರತೀಯ ಖಾತೆದಾರರ ಪಟ್ಟಿಯನ್ನು ಸ್ವಿಸ್‌ ಸರ್ಕಾರ ಸಿದ್ಧಪಡಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆದರೆ ಸ್ವಿಸ್‌ ಸರ್ಕಾರದಿಂದ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಭಾರತೀಯ ಖಾತೆದಾರರ ಮಾಹಿತಿ ನೀಡುವಂತೆ ನಾವು ಸ್ವಿಸ್‌ ಸರ್ಕಾರವನ್ನು ಕೋರಿದ್ದೇವೆ. ನಮ್ಮ ಮನವಿಗೆ ಸ್ಪಂಧಿಸುವುದಾಗಿ ಸ್ವಿಸ್‌ ಸರ್ಕಾರ ಹೇಳಿತ್ತು. ಇನ್ನು ಕೆಲ ದಿನಗಳಲ್ಲಿ ಪಟ್ಟಿ ಸರ್ಕಾರದ ಕೈ ಸೇರಲಿದೆ ಎಂಬ ಸುಳಿವು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT