ADVERTISEMENT

ಹತ್ತು ಗಂಟೆಗಳ ಅಂತರದಲ್ಲಿ ಹಳಿ ತಪ್ಪಿದ ಎರಡು ರೈಲು

ಏಜೆನ್ಸೀಸ್
Published 19 ಸೆಪ್ಟೆಂಬರ್ 2017, 14:12 IST
Last Updated 19 ಸೆಪ್ಟೆಂಬರ್ 2017, 14:12 IST
ಹತ್ತು ಗಂಟೆಗಳ ಅಂತರದಲ್ಲಿ ಹಳಿ ತಪ್ಪಿದ ಎರಡು ರೈಲು
ಹತ್ತು ಗಂಟೆಗಳ ಅಂತರದಲ್ಲಿ ಹಳಿ ತಪ್ಪಿದ ಎರಡು ರೈಲು   

ಸೀತಾಪುರ್‌(ಉತ್ತರ ಪ್ರದೇಶ): ಕೇವಲ ಹತ್ತು ಗಂಟೆಗಳ ಅಂತರದಲ್ಲಿ ಎರಡು ರೈಲುಗಳು ಹಳಿ ತಪ್ಪಿದ್ದು, ಯಾವುದೇ ಸಾವು–ನೋವಿನ ವರದಿಯಾಗಿಲ್ಲ.

‘ಎರಡೂ ಪ್ರಕರಣಗಳು ಇಲ್ಲಿನ ಕಂಟ್‌ ನಿಲ್ದಾಣದ ಬಳಿ ಒಂದೇ ಜಾಗದಲ್ಲಿ ಜರುಗಿವೆ. ಮೊದಲ ಅವಘಡ ಸೋಮವಾರ ರಾತ್ರಿ 9.40ರ ಸಮಯದಲ್ಲಿ ಸಂಭವಿಸಿತ್ತು. ಈ ವೇಳೆ 54322 ನಂಬರಿನ ಪ್ಯಾಸೆಂಜರ್‌ ರೈಲೊಂದು ಹಳಿ ತಪ್ಪಿತ್ತು. ಎರಡನೇ ಪ್ರಕರಣ ಮಂಗಳವಾರ ಬೆಳಿಗ್ಗೆ 7.10 ಗಂಟೆಗೆ ನಡೆದಿದ್ದು, ಈ ವೇಳೆ ಸರಕು ಸಾಗಣೆ ರೈಲು ಹಳಿಯಿಂದ ಜಾರಿದೆ’ ಎಂದು ಈಶಾನ್ಯ ರೈಲ್ವೆ ವಲಯದ ವಕ್ತಾರ ಅಲೋಕ್‌ ಶ್ರೀವಸ್ತವ ಅವರು ತಿಳಿಸಿದ್ದಾರೆ.

‘ಮೊದಲ ಪ್ರಕರಣದ ನಂತರ ಹಳಿಯನ್ನು ಸರಿಪಡಿಸಿ ಮಧ್ಯರಾತ್ರಿ 1.20ರ ವೇಳೆಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅದೇ ಹಳಿ ಮೇಲೆ ಹಲವು ರೈಲುಗಳು ಸಂಚರಿಸಿದ್ದವು. ಆದರೆ ಇಂದು ಬೆಳಿಗ್ಗೆ ಸರಕು ಸಾಗಣೆ ರೈಲು ಹಳಿ ತಪ್ಪಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಹಳಿಯಲ್ಲಿನ ದೋಷ ಸರಿಪಡಿಸಿದ ನಂತರ ಬೆಳಿಗ್ಗೆ 10.20ಕ್ಕೆ ಮತ್ತೆ ಸಂಚಾರ ಆರಂಭಿಸಲಾಯಿತು. ಸದ್ಯ ಅವಘಡಗಳ ಬಳಿಕ ವಿಭಾಗೀಯ ರೈಲು ಹಳಿ ವ್ಯವಸ್ಥಾಪಕ ಇಂಜಿನಿಯರ್‌ ಅವರನ್ನು ಅಮಾನತು ಮಾಡಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುವುದು’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.