ADVERTISEMENT

ಹಳಿ ತಪ್ಪಿದ ಅಜ್ಮಿರ್‌–ಸಿಯಾಲ್ದಾಹ್‌ ಎಕ್ಸ್‌ಪ್ರೆಸ್‌ ರೈಲು

ಇಬ್ಬರು ಮೃತ, 43 ಮಂದಿಗೆ ಗಾಯ

ಪಿಟಿಐ
Published 28 ಡಿಸೆಂಬರ್ 2016, 5:51 IST
Last Updated 28 ಡಿಸೆಂಬರ್ 2016, 5:51 IST
ಹಳಿ ತಪ್ಪಿದ ಅಜ್ಮಿರ್‌–ಸಿಯಾಲ್ದಾಹ್‌ ಎಕ್ಸ್‌ಪ್ರೆಸ್‌ ರೈಲು
ಹಳಿ ತಪ್ಪಿದ ಅಜ್ಮಿರ್‌–ಸಿಯಾಲ್ದಾಹ್‌ ಎಕ್ಸ್‌ಪ್ರೆಸ್‌ ರೈಲು   

ಕಾನ್ಪುರ : ಅಜ್ಮಿರ್‌–ಸಿಯಾಲ್ದಾಹ್‌ ಎಕ್ಸ್‌ಪ್ರೆಸ್‌ ರೈಲು  ಹಳಿ ತಪ್ಪಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 43ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಕಾನ್ಪುರ ದೆಹಾತ್‌ ಜಿಲ್ಲೆಯ ರೂರಾ ರೈಲ್ವೆ ನಿಲ್ದಾಣದ ಸಮೀಪ ಬುಧವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ದುರಂತ ಸಂಭವಿಸಿದೆ.

ಕಾಲುವೆಯ ಸೇತುವೆ ಮೇಲೆ ಸಂಚರಿಸುತ್ತಿದ್ದ ಹದಿನೈದು ಬೋಗಿಗಳನ್ನು ಹೊಂದಿದ್ದ 12987 ಅಜ್ಮಿರ್‌–ಸಿಯಾಲ್ದಹ ಎಕ್ಸ್‌ಪ್ರೆಸ್‌ ರೈಲು ಹಳ್ಳಿ ತಪ್ಪಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಸಚಿವ ಸುರೇಶ್‌ ಪ್ರಭು, ತನಿಖೆಗೆ ಆದೇಶಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.