ADVERTISEMENT

ಹೂಗ್ಲಿ ನದಿಯೊಳಗೆ ಮೆಟ್ರೊ ಸುರಂಗ ಮಾರ್ಗ

ಪಿಟಿಐ
Published 28 ಮೇ 2017, 19:30 IST
Last Updated 28 ಮೇ 2017, 19:30 IST
ಹೂಗ್ಲಿ ನದಿಯೊಳಗೆ ಮೆಟ್ರೊ ಸುರಂಗ ಮಾರ್ಗ
ಹೂಗ್ಲಿ ನದಿಯೊಳಗೆ ಮೆಟ್ರೊ ಸುರಂಗ ಮಾರ್ಗ   

ನವದೆಹಲಿ: ಹೌರಾ ಮತ್ತು ಕೋಲ್ಕತ್ತ ಮಧ್ಯೆ ಸಂಪರ್ಕ ಕಲ್ಪಿಸಲು ಹೂಗ್ಲಿ ನದಿಯ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಮೆಟ್ರೊ ಸುರಂಗ ಮಾರ್ಗ ಮುಂದಿನ ವಾರ ಪೂರ್ಣಗೊಳ್ಳಲಿದೆ.

ಕೋಲ್ಕತ್ತಾದ 16.6 ಕಿ.ಮೀ ಉದ್ದದ ಪೂರ್ವ–ಪಶ್ಚಿಮ ಮೆಟ್ರೊ ಕಾರಿಡಾರ್‌ ಯೋಜನೆಯು 10.6 ಕಿಮೀ ಉದ್ದದ ಸುರಂಗ ಹೊಂದಿದೆ. ಇದರಲ್ಲಿ  520 ಮೀಟರ್‌ ಉದ್ದದ ಅವಳಿ ಮಾರ್ಗವು ನೀರಿನಡಿ ಹಾದುಹೋಗಲಿದೆ. 

ಹೌರಾ ಮತ್ತು ಮಹಾಕರನ್‌ ಮೆಟ್ರೊ ನಿಲ್ದಾಣಗಳ ಮಧ್ಯೆ ಸಂಚರಿಸುವ ರೈಲಿನಲ್ಲಿ ಪ್ರಯಾಣಿಕರು ಕೇವಲ ಒಂದು ನಿಮಿಷ ನೀರಿ­ನಡಿಯ ಸುರಂಗದಲ್ಲಿ ತೆರಳಲಿದ್ದಾರೆ. ಇಲ್ಲಿ ಗಂಟೆಗೆ 80 ಕಿಲೊ ಮೀಟರ್‌ ವೇಗದಲ್ಲಿ ಮೆಟ್ರೊ ಸಂಚರಿಸಲಿದೆ.

ಈ ಕಾಮಗಾರಿಗೆ ಕಳೆದ ವರ್ಷದ ಏಪ್ರಿಲ್‌ನಲ್ಲಿ ಚಾಲನೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT