ADVERTISEMENT

ಹೊಸ ವಿನ್ಯಾಸದ ವಿಸ್ಟಾಡೋಮ್‌ ಕೋಚ್‌ ಒಳಗೊಂಡ ರೈಲಿಗೆ ಚಾಲನೆ

ಏಜೆನ್ಸೀಸ್
Published 17 ಏಪ್ರಿಲ್ 2017, 10:09 IST
Last Updated 17 ಏಪ್ರಿಲ್ 2017, 10:09 IST
ಹೊಸ ವಿನ್ಯಾಸದ ವಿಸ್ಟಾಡೋಮ್‌ ಕೋಚ್‌ ಒಳಗೊಂಡ ರೈಲಿಗೆ ಚಾಲನೆ
ಹೊಸ ವಿನ್ಯಾಸದ ವಿಸ್ಟಾಡೋಮ್‌ ಕೋಚ್‌ ಒಳಗೊಂಡ ರೈಲಿಗೆ ಚಾಲನೆ   

ವಿಶಾಖಪಟ್ಟಣಂ:  ವಿಶಾಖಪಟ್ಟಣಂ:  ಆಂಧ್ರ ಪ್ರದೇಶದ ವಿಶಾಖಪಟ್ಟಣಂ– ಅರಕು ಕಣಿವೆ ಪ್ರದೇಶದ ನಡುವೆ ಸಂಪರ್ಕಿಸುವ ನೂತನ ವಿನ್ಯಾಸವನ್ನು ಒಳಗೊಂಡ ರೈಲನ್ನು ಭುವನೇಶ್ವರದ ರೈಲು ಸದನದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಕೇಂದ್ರ ರೈಲ್ವೆ ಸಚಿವ ಸುರೇಶ್‌ ಪ್ರಭು ಉದ್ಘಾಟಿಸಿದ್ದಾರೆ.

ಭಾನುವಾರ  ಹೊಸ ವಿನ್ಯಾಸದ ವಿಸ್ಟಾಡೋಮ್‌ ಕೋಚ್‌ ಒಳಗೊಂಡ ರೈಲಿಗೆ ಚಾಲನೆ ದೊರೆತಿದೆ.

ಈ ಕೋಚ್‌ನ ಛಾವಣಿ ಸಂಪೂರ್ಣ ಗಾಜಿನಿಂದ ನಿರ್ಮಿಸಲಾಗಿದ್ದು, ಎಲ್‌ಇಡಿ ದೀಪಗಳು, ಜಿಪಿಎಸ್‌ ಸೌಲಭ್ಯ, ತಿರುಗುವ ಆಸನ ವ್ಯವಸ್ಥೆಯನ್ನು ಒಳಗೊಂಡಿದೆ.

ADVERTISEMENT

ವಿಶಾಖಪಟ್ಟಣಂನಲ್ಲಿ ಯಂತ್ರೀಕೃತ ಬಟ್ಟೆ ಒಗೆದು ಸಿದ್ಧಪಡಿಸುವ ಕೇಂದ್ರ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿದ್ದು, ಇದರಿಂದಾಗಿ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಹಾಸು ಹೊದಿಕೆಗಳು ದೊರೆಯುತ್ತವೆ ಎಂದು ಸಚಿವ ಸುರೇಶ್‌ ಪ್ರಭು ಹೇಳಿದರು.

ವಿಶಾಖಪಟ್ಟಣಂನಲ್ಲಿ ಏರ್ಪಡಿಸಲಾಗಿದ ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶದ ಸಂಸದೆ ಕೊತ್ತಪಲ್ಲಿ ಗೀತಾ ಹಾಗೂ ಇತರೆ ಸಂಸದರು ,ಶಾಸಕರು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.