ಪುಣೆ (ಪಿಟಿಐ): ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಇಲ್ಲಿನ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ 6.50ರ ಹೊತ್ತಿಗೆ ಕೊನೆಯುಸಿರೆಳೆದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಪತ್ನಿ ಕಮಲಾ (89), ನಿವೃತ್ತ ಪತ್ರಕರ್ತ ಮಗ ಶ್ರೀನಿವಾಸ್ ಹಾಗೂ ಸೊಸೆ ಉಷಾ ಅವರನ್ನು ಲಕ್ಷ್ಮಣ್ ಅಗಲಿದ್ದಾರೆ.
ಮೂತ್ರನಾಳದ ಸೋಂಕು ಹಾಗೂ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಇದೇ 17 ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಂಗಾಂಗ ವೈಫಲ್ಯದ ಕಾರಣ ಜೀವರಕ್ಷಕ ಸಾಧನ ಅಳವಡಿಸಲಾಗಿತ್ತು.
ಶಾಲಾ ಶಿಕ್ಷಕ ಕೃಷ್ಣಸ್ವಾಮಿ ಅವರ ಮಗನಾಗಿದ್ದ ಲಕ್ಷ್ಮಣ್, ಮೈಸೂರಿನಲ್ಲಿ ಜನಿಸಿದ್ದರು. ಪ್ರಖ್ಯಾತ ಇಂಗ್ಲಿಷ್ ಕಾದಂಬರಿಕಾರ ದಿವಂಗತ ಆರ್.ಕೆ. ನಾರಾಯಣ್ ಅವರು, ಲಕ್ಷ್ಮಣ್ ಅವರ ಹಿರಿಯಣ್ಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.