ADVERTISEMENT

‘ಜಿಂದಾಲ್‌ನಿಂದ ತಕ್ಷಣ ಆಂಧ್ರಕ್ಕೆ ವಿದ್ಯುತ್‌’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 19:30 IST
Last Updated 24 ಏಪ್ರಿಲ್ 2014, 19:30 IST

ಹೈದರಾಬಾದ್‌(ಪಿಟಿಐ): ಬಳ್ಳಾರಿಯ ಜಿಂದಾಲ್‌ ವಿದ್ಯುತ್‌ ಘಟಕದಿಂದ ಆಂಧ್ರ ಪ್ರದೇಶಕ್ಕೆ 300 ಮೆಗಾವಾಟ್‌ ವಿದ್ಯುತ್‌ ಪೂರೈಕೆಯನ್ನು ತಕ್ಷಣ ಆರಂಭಿಸುವಂತೆ ದಕ್ಷಿಣ ವಲಯ ವಿದ್ಯುತ್‌ ಹಂಚಿಕೆ ಕೇಂದ್ರಕ್ಕೆ (ಎಸ್‌ಆರ್‌ಎಲ್‌ಡಿಸಿ) ಆಂಧ್ರ ಪ್ರದೇಶ ಹೈಕೋರ್ಟ್‌ ಸೂಚಿಸಿದೆ.

ಕರ್ನಾಟಕವು ತೀವ್ರ ವಿದ್ಯುತ್‌ ಕೊರತೆ ಎದುರಿಸುತ್ತಿರುವುದರಿಂದ ಆಂಧ್ರ ಪ್ರದೇಶಕ್ಕೆ ವಿದ್ಯುತ್‌ ಪೂರೈಸಲು ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌) ಕಳೆದ ತಿಂಗಳು ಹಿಂದಕ್ಕೆ ಪಡೆದಿತ್ತು.

ಹಾಗಾಗಿ ಅಂತರರಾಜ್ಯ ವಿದ್ಯುತ್‌ ವಿತರಣೆಯ ಹೊಣೆ ಹೊತ್ತಿರುವ ಎಸ್‌ಆರ್‌ಎಲ್‌ಡಿಸಿ, ಆಂಧ್ರ ಪ್ರದೇಶಕ್ಕೆ ಜಿಂದಾಲ್‌ನಿಂದ ವಿದ್ಯುತ್‌ ಪೂರೈಕೆಯನ್ನು ಸ್ಥಗಿತ­ಗೊಳಿಸಿತ್ತು.

ಇದರಿಂದಾಗಿ ಆಂಧ್ರ ಪ್ರದೇಶ ಕೇಂದ್ರ ವಿದ್ಯುತ್‌ ಪ್ರಸರಣ ನಿಗಮ ಹೈಕೋರ್ಟ್‌ಗೆ ದೂರು ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.