ADVERTISEMENT

‘ಪೌರಾತ್ಯ ದೃಷ್ಟಿ, ಪಾಶ್ಚಿಮಾತ್ಯ ಬಂಧ ಅಗತ್ಯ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2014, 11:27 IST
Last Updated 25 ಸೆಪ್ಟೆಂಬರ್ 2014, 11:27 IST

ನವದೆಹಲಿ (ಐಎಎನ್‌ಎಸ್‌): ‘ಭಾರತ ಪೌರಾತ್ಯ ದೃಷ್ಟಿಕೋನ ಹಾಗೂ ಪಾಶ್ಚಿಮಾತ್ಯ ಸಂಬಂಧದ ನೀತಿಯ ಬಗ್ಗೆ ಚಿಂತಿಸುವ ಅಗತ್ಯವಿದೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

‘ಮೇಕ್‌ ಇನ್‌ ಇಂಡಿಯಾ’ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ನಾವು ಕೆಲವೊಮ್ಮೆ ಪೌರಾತ್ಯ ದೃಷ್ಟಿಕೋನದ ಬಗ್ಗೆ ಮಾತನಾಡುತ್ತೇವೆ. ಅಂತೆಯೇ ಪಾಶ್ಚಿಮಾತ್ಯ ಸಂಬಂಧದ ಬಗ್ಗೆಯೂ ಗಮನ ನೀಡಬೇಕಿದೆ’ ಎಂದಿದ್ದಾರೆ.

ಏಷ್ಯಾ ಪೆಸಿಫಿಕ್‌ ರಾಷ್ಟ್ರಗಳೊಂದಿಗಿನ ವ್ಯಾಪಾರ ಸಂಬಂಧ ವೃದ್ಧಿಯ ಬಗ್ಗೆ ಭಾರತ ಉತ್ಸುಕವಾಗಿರುವ ಈ ದಿನಗಳಲ್ಲಿ ಮೋದಿ ಅವರ ಮಾತು ಮಹತ್ವ ಪಡೆದುಕೊಂಡಿದೆ. ಭಾರತದಲ್ಲಿ ಉತ್ಪಾದನಾ ಕ್ಷೇತ್ರ ಅಭಿವೃದ್ಧಿಗೆ ನೀಲನಕ್ಷೆ ರೂಪಿಸುವ ನಿಟ್ಟಿನಲ್ಲಿ ‘ಮೇಕ್‌ ಇನ್‌ ಇಂಡಿಯಾ’ ಅಭಿಯಾನ ಮಹತ್ವದ್ದಾಗಿದೆ.

ADVERTISEMENT

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಅಮೆರಿಕಕ್ಕೆ ತೆರಳುವ ಮುನ್ನ ‘ಮೇಕ್‌ ಇನ್‌ ಇಂಡಿಯಾ’ ಅಭಿಯಾನಕ್ಕೆ ಮೋದಿ ಚಾಲನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.