ADVERTISEMENT

‘ವ್ಯಾಪಂ’: ವಿಚಾರಣೆಗೊಳಪಟ್ಟ ಪೊಲೀಸ್ ನೇಣಿಗೆ ಶರಣು

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 6:38 IST
Last Updated 7 ಜುಲೈ 2015, 6:38 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಡಿಎಚ್ ನ್ಯೂಸ್: ದೇಶದಾದ್ಯಂತ ಸುದ್ದಿ ಮಾಡಿರುವ ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ(ವ್ಯಾಪಂ) ನೇಮಕಾತಿ ಹಗರಣ ಸಂಬಂಧ ವಿಚಾರಣೆ ನಡೆಸಲಾಗಿದ್ದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಸೋಮವಾರ ಬೆಳಿಗ್ಗೆ ನೇಣಿಗೆ ಶರಣಾಗಿರುವ ಆಘಾತಕಾರಿ ಅಂಶ ತಡವಾಗಿ ಬೆಳಕಿಗೆ ಬಂದಿದೆ.

ಟಿಕಮ್ಗರ್‌ನ ಹೊರ ವಲಯದ ಪ್ರವಾಸಿ ತಾಣದ ವಸತಿ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಾನ್‌ಸ್ಟೆಬಲ್ ಶವ ಪತ್ತೆಯಾಗಿದೆ. ಈ ಬಗ್ಗೆ ಮಂಗಳವಾರ ವರದಿಯಾಗಿದೆ.

ವ್ಯಾಪಂ ಹಗರಣ ಸಂಬಂಧ ನಾಲ್ಕು ತಿಂಗಳ ಹಿಂದೆ ಕಾನ್‌ಸ್ಟೆಬಲ್ ಅವರನ್ನು ವಿಚಾರಣೆ ನಡೆಸಲಾಗಿತ್ತು ಎನ್ನಲಾಗಿದ್ದು, ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು.

ಆದರೆ, ಕಾನ್‌ಸ್ಟೆಬಲ್ ಸಾವು ವ್ಯಾಪಂ ಹಗರಣ ಸಂಬಂಧ ಸಂಭವಿಸಿಲ್ಲ ಎಂದಿರುವ ಪೊಲೀಸರು, ಕಾನ್‌ಸ್ಟೆಬಲ್ ಖಿನ್ನತೆಗೆ ಒಳಗಾಗಿ ಮದ್ಯ ವ್ಯಸನಿಯಾಗಿದ್ದ ಎಂದು ಹೇಳಿದ್ದಾರೆ.

ಪ್ರಕರಣದ ಜತೆ ತಳುಕು ಹಾಕಿಕೊಂಡಿರುವ ನಾಲ್ಕು ಮಂದಿ ಕಳೆದ ನಾಲ್ಕು ದಿನಗಳಲ್ಲಿ ಸಾವಿಗೆ ಶರಣಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.