ADVERTISEMENT

‘ಸ್ವಿಸ್‌ ಬ್ಯಾಂಕಿನಲ್ಲಿ ಖಾತೆಯೇ ಇಲ್ಲ’

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2014, 11:30 IST
Last Updated 27 ಅಕ್ಟೋಬರ್ 2014, 11:30 IST

ರಾಜ್ಕೋಟ್, ಗುಜರಾತ್ (ಪಿಟಿಐ): ವಿದೇಶದಲ್ಲಿ ಕಪ್ಪುಹಣ ಇಟ್ಟಿರುವವರ ಪಟ್ಟಿಯಲ್ಲಿ ಹೆಸರಿರುವ ರಾಜ್ಕೋಟ್ ಮೂಲದ ವ್ಯಾಪಾರಿ ಪಂಜಕ್ ಲೋಧ್ಯಾ ಅವರು ವಿದೇಶಿ ಬ್ಯಾಂಕ್‌ ಖಾತೆ ಹೊಂದಿರುವುದನ್ನು ನಿರಾಕರಿಸಿದ್ದಾರೆ. 

‘ಸ್ವಿಸ್‌ ಬ್ಯಾಂಕಿನಲ್ಲಿ ನನ್ನ ಖಾತೆಯೇ ಇಲ್ಲ. ವಿದೇಶದಲ್ಲಿ ಯಾವುದೇ ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲ. ಕಪ್ಪುಹಣ ಹೊಂದಿದವರ ಪಟ್ಟಿಯಲ್ಲಿ ಹೆಸರಿರುವ ಸಂಗತಿ ನನಗೆ ಮಾಧ್ಯಮದಿಂದಲೇ ತಿಳಿಯಿತು. ಅದರಿಂದ ನನಗೆ ಆಶ್ಚರ್ಯವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಅಲ್ಲದೇ, ‘ಆದಾಯ ತೆರಿಗೆ ಇಲಾಖೆಯ ಎದುರು ನಾನು ನನ್ನ ಎಲ್ಲಾ ಆಸ್ತಿಯನ್ನು ಘೋಷಿಸಿಕೊಂಡಿರುವೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಎಲ್ಲಾ ನಿಯಮ ಪಾಲಿಸಲಾಗಿದೆ (ನವದೆಹಲಿ ವರದಿ): ವಿದೇಶದಲ್ಲಿ ಕಪ್ಪುಹಣ ಇಟ್ಟವರೆಂದು ಕೇಂದ್ರ ಸರ್ಕಾರ ಬಹಿರಂಗಗೊಳಿಸಿರುವ ಮೂವರಲ್ಲಿ ಒಬ್ಬರಾದ ಪ್ರದೀಪ್ ಬರ್ಮನ್‌, ತಮ್ಮ ವಿದೇಶಿ ಖಾತೆ ಕಾನೂನು ಬದ್ಧವಾಗಿದೆ ಎಂದಿದ್ದಾರೆ.

‘ಪ್ರದೀಪ್‌ ಅವರು ಎನ್‌ಆರ್‌ಐ ಆಗಿದ್ದಾಗ ಈ ಖಾತೆ ತೆರೆಯಲಾಗಿತ್ತು. ಅದನ್ನು ತೆರೆಯಲು ಕಾನೂನು ಬದ್ಧವಾಗಿಯೇ ಅವರಿಗೆ ಅವಕಾಶ ನೀಡಲಾಗಿತ್ತು’ ಎಂದು ಡಾಬರ್‌ ಕಂಪೆನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

‘ಖಾತೆ ತೆರೆಯುವ ವೇಳೆ ಎಲ್ಲಾ ಕಾನೂನುಗಳನ್ನು ಪಾಲಿಸಲಾಗಿದೆ. ಕಾನೂನ ಪ್ರಕಾರ ಅನ್ವಯವಾಗುವ ಎಲ್ಲಕಡೆಯೂ ಆದಾಯ ತೆರಿಗೆ ಇಲಾಖೆ ಸಂಬಂಧಿತ ಹಾಗೂ ಇತರ ತೆರಿಗೆಗಳನ್ನೂ ಪಾವತಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.