ADVERTISEMENT

ದೆಹಲಿ ನಿಗೂಢ ಸಾವು ಪ್ರಕರಣ: ದಿನಕ್ಕೊಂದು ವಿಚಿತ್ರ ತಿರುವು

ಏಜೆನ್ಸೀಸ್
Published 4 ಜುಲೈ 2018, 3:53 IST
Last Updated 4 ಜುಲೈ 2018, 3:53 IST
ದೆಹಲಿ ಸಾಮೂಹಿಕ ಸಾವು 
ದೆಹಲಿ ಸಾಮೂಹಿಕ ಸಾವು    

ನವದೆಹಲಿ: ಬುರಾರಿ ಪ್ರದೇಶದಲ್ಲಿ ಮಕ್ಕಳು ಸೇರಿ ಕುಟುಂಬದ 11 ಮಂದಿಯ ನಿಗೂಢ ಸಾವು ಪ್ರಕರಣ ದಿನೇ ದಿನೇ ಮತ್ತಷ್ಟು ಕಗ್ಗಂಟಾಗುತ್ತಿದೆ. ಆತ್ಮಹತ್ಯೆ, ಕೊಲೆ, ಪವಾಡ, ಮಾನಸಿಕ ಕಾಯಿಲೆ,..ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ಚುರುಕಾಗಿದೆ. ಚರ್ಚೆಗಳು ಊಹಾಪೋಹಗಳಿಗಂತೂ ತಡೆಯಿಲ್ಲ.

ನೇಣು ಹಾಕಿರುವುದರಿಂದಲೇ ಸಾವು ಸಂಭವಿಸಿರುವುದಾಗಿಶವ ಪರೀಕ್ಷೆಯ ವರದಿಯೂ ಹೇಳುತ್ತಿದೆ. ಈ ಸಾಮೂಹಿಕ ಸಾವಿನಲ್ಲಿ ಕಂಡು ಬಂದಿರುವ ಕೆಲವು ವಿಚಿತ್ರಗಳು ಹೀಗೆವೆ;

* ಸೈಲೆಂಟ್‌ ಮೋಡ್‌ನಲ್ಲಿದ್ದ 8 ಸೆಲ್‌ಫೋನ್‌ಗಳನ್ನು ಡ್ರಾಯರ್‌ನಲ್ಲಿ ಇಡಲಾಗಿತ್ತು. ಪೊಲೀಸರಿಗೆ ದೊರೆತಿರುವ ಕೈಬರಹದ ಪಟ್ಟಿಯಲ್ಲಿ ಈ ಅಂಶ ನಮೂದಿಸಿದೆ

ADVERTISEMENT

* ಮನೆಯ ಗೋಡೆಗೆ 11 ಪ್ಲಾಸ್ಟಿಕ್‌ ಪೈಪ್‌ಗಳು ಅಳವಡಿಸಿರುವುದುಕಂಡುಬಂದಿವೆ. ಆದರೆ, ಈ ಪೈಪ್‌ಗಳು ಯಾವುದೇ ನೀರಿನ ಮೂಲಗಳಿಗೂ ಸಂಪರ್ಕ ಹೊಂದಿಲ್ಲ

* ಮನೆಯ ಮುಖ್ಯದ್ವಾರವು 11 ಕಬ್ಬಿಣದ ಸರಳುಗಳನ್ನು ಒಳಗೊಂಡಿದೆ

* ಸಾಮೂಹಿಕ ಸಾವು(ಆಚರಣೆ) ನಡೆಸುವಾಗ ಮುಖ್ಯದ್ವಾರ ತೆರೆದಿತ್ತು. ಬಾಗಿಲು ಹಾಕದಂತೆ ಕುಟುಂಬ ನಿರ್ಣಯಿಸಿತ್ತು

* ಸಮೀಪದ ರೆಸ್ಟೊರೆಂಟ್‌ಗೆ 20 ಚಪಾತಿ ಆರ್ಡರ್‌ ಕೊಟ್ಟಿದ್ದ ಕುಟುಂಬ. ಚಪಾತಿ ಜತೆಗೆ ದಾಲ್‌, ಪಲ್ಯ ಅಥವಾ ತರಕಾರಿಗಳನ್ನು ತರಿಸಿಕೊಂಡಿರಲಿಲ್ಲ

* ಕುಟುಂಬದ 11 ಜನರ ಕಣ್ಣುಗಳಿಗೂ ಬಟ್ಟೆ ಕಟ್ಟಲಾಗಿತ್ತು. ಕಿವಿಗಳಿಗೆ ಹತ್ತಿ ತುರುಕಿತ್ತು ಹಾಗೂ ಬಾಯಿಯನ್ನು ಟೇಪಿನಿಂದ ಸುತ್ತಲಾಗಿತ್ತು. ಒಂಬತ್ತು ಮಂದಿಯ ಕಾಲುಗಳು ಕಟ್ಟಿದ ಸ್ಥಿತಿಯಲ್ಲಿದ್ದವು

* ಕುಟುಂಬದ 11 ಜನರಲ್ಲಿ ಮನೆಯ ಮೇಲ್ಛಾವಣಿಯ ಸರಳುಗಳಲ್ಲಿ 9 ಮಂದಿ ನೇತಾಡುತ್ತಿದ್ದರು

* ಕುಟುಂಬದ ಹಿರಿಯರಾದ 77 ವರ್ಷದ ನಾರಾಯಣ್ ದೇವಿ ಶವ ಕೋಣೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು

* ಆಚರಣೆಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಬರೆಯಲಾದ 2 ನೋಟ್‌ ಪುಸ್ತಕಗಳು ಪ್ರಾರ್ಥನಾ ಕೋಣೆಯಲ್ಲಿ ಪತ್ತೆಯಾಗಿತ್ತು

* ಮನೆಯ ಎರಡನೇ ಮಹಡಿಯಲ್ಲಿ ಸಾಕು ನಾಯಿಯನ್ನು ಚೇನ್‌ ಹಾಕಿ ಕಟ್ಟಲಾಗಿತ್ತು. ಪೊಲೀಸರಿಗೆ ಶ್ವಾನ ಕಂಡುಬಂದಾಗ ಅದು ಅತಿಯಾದ ಜ್ವರದಿಂದ ಬಳಲುತಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.