ADVERTISEMENT

12 ರಾಜ್ಯಗಳಲ್ಲಿ ನೀರು ಸಂಗ್ರಹ ಕುಸಿತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2014, 19:30 IST
Last Updated 4 ಜುಲೈ 2014, 19:30 IST

ನವದೆಹಲಿ (ಪಿಟಿಐ):  ದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 12 ರಾಜ್ಯಗಳ ಜಲಾಶಯ­ಗಳಲ್ಲಿ ನೀರಿನ ಮಟ್ಟ ಕುಸಿದಿ­ರುವು­ದಾಗಿ ಕೇಂದ್ರೀಯ ಜಲ ಆಯೋಗ (ಸಿಡಬ್ಲ್ಯುಸಿ) ಶುಕ್ರ­ವಾರ ತಿಳಿಸಿದೆ.

ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜ­ರಾತ್‌, ಉತ್ತರಪ್ರದೇಶ, ಉತ್ತರಾ­ಖಂಡ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್‌ ಮತ್ತು ತ್ರಿಪುರಾ ರಾಜ್ಯಗಳ ಜಲಾಶಯಗಳಲ್ಲಿ ಕಳೆದ ಜುಲೈ 3ರಲ್ಲಿ ದಾಖಲಾದ ನೀರಿನ ಪ್ರಮಾ­ಣ­ಕ್ಕಿಂತ ಕಡಿಮೆ ನೀರು ಸಂಗ್ರಹ­ವಾಗಿದೆ. ಆದರೆ ಪಂಜಾಬ್‌, ಒಡಿಶಾ ಹಾಗೂ ಛತ್ತೀಸಗಡ ರಾಜ್ಯ­ಗಳ­ ಜಲಾ­ಶಯ­­ಗಳಲ್ಲಿ ನೀರಿನ ಸಂಗ್ರಹ ಈ ವರ್ಷವೂ ಉತ್ತಮ­ವಿದೆ ಎಂದು ಹೇಳಿದೆ.

ಶೇ 53ರಷ್ಟು ಮಳೆ ಕೊರತೆ:  ರಾಷ್ಟ್ರದಲ್ಲಿ ಇದುವರೆಗೆ ಮುಂಗಾರು ಕೊರತೆ ಪ್ರಮಾಣ ಶೇ 53ರಷ್ಟು ಎಂದು ಹವಾಮಾನ ತಜ್ಞರು ಹೇಳಿದ್ದು, ದಕ್ಷಿಣ ಭಾರತ ಮತ್ತು ಮಧ್ಯಭಾರತದಲ್ಲಿ ಅತಿ ಹೆಚ್ಚು ಕೊರತೆ ಕಂಡುಬಂದಿದೆ. ದಕ್ಷಿಣ ಭಾರತದಲ್ಲಿ ಶೇ 62 ಮತ್ತು ಮಧ್ಯಭಾರತದಲ್ಲಿ ಶೇ 74ರಷ್ಟು ಕೊರತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.