ನವದೆಹಲಿ (ಪಿಟಿಐ): ಇಲ್ಲಿಯ ಸೇಂಟ್ ಮೇರಿಸ್ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಯಶವರ್ಧನ್ ಶುಕ್ಲಾ 13ನೇ ವರ್ಷದಲ್ಲಿಯೇ ಕಾದಂಬರಿ ಬರೆದ ಶ್ರೇಯಕ್ಕೆ ಪಾತ್ರನಾಗಿದ್ದಾನೆ.
ರಾಕ್ಷಸರ ದಾಳಿಯಿಂದ ತನ್ನ ಎಲ್ಲ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಆಕಸ್ಮಿಕವಾಗಿ ದಕ್ಷಿಣ ಧ್ರುವಕ್ಕೆ ಬಂದಿಳಿಯುವ ಡೇವಿಡ್ ಎಂಬ ಶಾಲಾ ಬಾಲಕ ದೇವರು ಮತ್ತು ರಾಕ್ಷಸರೊಂದಿಗೆ ಮುಖಾಮುಖಿಯಾಗುವ ಕಥೆಯನ್ನು ಯಶವರ್ಧನ್ನ ‘ಗಾಡ್ಸ್ ಆಫ್ ಅಂಟಾರ್ಟಿಕ’ ಕಾದಂಬರಿ ಒಳಗೊಂಡಿದೆ. ಮೊದಲ ಕಾದಂಬರಿಯಲ್ಲಿಯೇ ಭರವಸೆ ಮೂಡಿಸಿರುವ ಯಶ್, ಪೌರಾಣಿಕ ಕಥೆಗಳು, ಜೆ.ಕೆ. ರೌಲಿಂಗ್ ಅವರ ‘ಹ್ಯಾರಿ ಪಾಟರ್’ ಕೃತಿ ತನ್ನ ಮೇಲೆ ಪ್ರಭಾವ ಬೀರಿದೆ ಎನ್ನುತ್ತಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.