ADVERTISEMENT

16 ವರ್ಷದ ಹೋರಾಟಕ್ಕೆ ಸಿಕ್ಕಿದ್ದು 90 ಮತಗಳು

ಏಜೆನ್ಸೀಸ್
Published 11 ಮಾರ್ಚ್ 2017, 11:33 IST
Last Updated 11 ಮಾರ್ಚ್ 2017, 11:33 IST
16 ವರ್ಷದ ಹೋರಾಟಕ್ಕೆ ಸಿಕ್ಕಿದ್ದು 90 ಮತಗಳು
16 ವರ್ಷದ ಹೋರಾಟಕ್ಕೆ ಸಿಕ್ಕಿದ್ದು 90 ಮತಗಳು   

ನವದೆಹಲಿ: ಮಣಿಪುರದಲ್ಲಿ ರಾಜಕೀಯ ಮುನ್ನಡೆ ಬಯಸಿದ್ದ ಸಾಮಾಜಿಕ ಹೋರಾಟಗಾರ್ತಿ ಇರೋಮ್‌ ಶರ್ಮಿಳಾ ಸೋಲು ಕಂಡಿದ್ದಾರೆ. ಶರ್ಮಿಳಾ ಸ್ಪರ್ಧಿಸಿದ್ದ ತೋಬಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಒಕ್ರಮ್ ಇಬೋಬಿ ಸಿಂಗ್ ಗೆಲುವು ಸಾಧಿಸಿದ್ದಾರೆ.

ಈ ಚುನಾವಣೆಯಲ್ಲಿ ಇರೋಮ್‌ ಶರ್ಮಿಳಾ 90 ಮತಗಳನ್ನು ಗಳಿಸಲು ಮಾತ್ರ ಸಾಧ್ಯವಾಗಿದೆ. ಸೇನಾ ವಿಶೇಷಾಧಿಕಾರ ಕಾಯ್ದೆ ರದ್ದತಿಗಾಗಿ 16 ವರ್ಷಗಳ ಉಪವಾಸ ಸತ್ಯಾಗ್ರಹ ಮುಗಿಸಿದ ಬಳಿಕ ರಾಜಕೀಯ ಜೀವನದಲ್ಲಿ ಏಳ್ಗೆ ಬಯಸಿದ್ದ ಶರ್ಮಿಳಾ ಪಿಆರ್‌ಜೆಎ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸಿದ್ದರು.

ಮಧ್ಯಾಹ್ನ 2.30ರ ವೇಳೆಗೆ ಮಣಿಪುರದಲ್ಲಿ ಕಾಂಗ್ರೆಸ್‌ 14, ಬಿಜೆಪಿ 11, ಎನ್‌ಪಿಎಫ್‌ 3, ಎನ್‌ಪಿಪಿ 3 ಮತ್ತು ಲೋಕಜನ ಶಕ್ತಿ ಪಕ್ಷ 1 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.