ADVERTISEMENT

32 ಪಾಕ್‌ ಮೀನುಗಾರರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಮೇ 2014, 14:05 IST
Last Updated 28 ಮೇ 2014, 14:05 IST

ಅಹಮದಾಬಾದ್‌ (ಪಿಟಿಐ): ಸೌಹಾರ್ದ ಪ್ರಕ್ರಿಯೆಯ ಭಾಗವಾಗಿ ಪಾಕಿಸ್ತಾನ 151ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಎರಡು ದಿನಗಳ ಬಳಿಕ ಗುಜರಾತ್‌ನ ಕಛ್‌ ಜಿಲ್ಲೆಯಲ್ಲಿದ್ದ 32 ಪಾಕ್‌ ಮೀನುಗಾರರನ್ನು ಭಾರತವು ಬುಧವಾರ ಬಿಡುಗಡೆ ಮಾಡಿದ್ದು, ಅವರೆಲ್ಲ ಈಗಾಗಲೇ ತಮ್ಮ ದೇಶಕ್ಕೆ ತೆರಳಲು ವಾಘಾ ಗಡಿಯತ್ತ ಪ್ರಯಾಣ ಬೆಳೆಸಿದ್ದಾರೆ.

‘ಭಾರತೀಯ ಜಲಗಡಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ 32 ಪಾಕಿಸ್ತಾನಿ ಮೀನುಗಾರರನ್ನು ವಶಕ್ಕೆ ಪಡೆಯಲಾಗಿತ್ತು. ಅವರನ್ನು ಕಳೆದ ಆರು ತಿಂಗಳಿನಿಂದ ಭುಜ್ ಮೂಲದ ಜಂಟಿ ವಿಚಾರಣಾ ಕೇಂದ್ರದಲ್ಲಿ ಇರಿಸಲಾಗಿತ್ತು. ಅವರನ್ನು ಇಂದು(ಬುಧವಾರ) ನಾವು ಬಿಡುಗಡೆ ಮಾಡಿದ್ದೇವೆ. ಆ ಮೀನುಗಾರರೊಂದಿಗೆ ನಮ್ಮ ತಂಡ ಈಗಾಗಲೇ ವಾಘಾ ಗಡಿಗೆ ಪ್ರಯಾಣಿಸಿದೆ’ ಎಂದು ಕಚ್‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಪಶ್ಚಿಮ) ವಿಧಿ ಚೌಧರಿ ತಿಳಿಸಿದ್ದಾರೆ.

32 ಮೀನುಗಾರರನ್ನು ವಾಘಾ ಗಡಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.