ADVERTISEMENT

5 ದಿನಗಳಲ್ಲಿ 30 ಕೆ.ಜಿ ತೂಕ ಇಳಿಕೆ

ವಿಶ್ವದ ಭಾರಿ ತೂಕದ ಮಹಿಳೆ

ಏಜೆನ್ಸೀಸ್
Published 17 ಫೆಬ್ರುವರಿ 2017, 10:07 IST
Last Updated 17 ಫೆಬ್ರುವರಿ 2017, 10:07 IST
5 ದಿನಗಳಲ್ಲಿ 30 ಕೆ.ಜಿ ತೂಕ ಇಳಿಕೆ
5 ದಿನಗಳಲ್ಲಿ 30 ಕೆ.ಜಿ ತೂಕ ಇಳಿಕೆ   

ಮುಂಬೈ: ವಿಶ್ವದ ಭಾರಿ ತೂಕದ (500 ಕೆ.ಜಿ) ಮಹಿಳೆ ಈಜಿಪ್ಟ್‌ನ ಎಮಾನ್‌ ಅಬ್ದೆಲಾತೀಫ್‌ (37) ಮುಂಬೈನ ಸೈಫಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆಯುತ್ತಿದ್ದು, 5 ದಿನಗಳಲ್ಲಿ 30 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.

ಎಮಾನ್‌ ಅಬ್ದೆಲಾತೀಫ್‌ ಅವರಿಗೆ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 3 ವಾರಗಳ ಬಳಿಕ ಶಸ್ತ್ರಚಿಕಿತ್ಸೆ ನಡೆಸಲು ಅಲೋಚಿಸಿದ್ದೇವೆ, ಶಸ್ತ್ರಚಿಕಿತ್ಸೆಗೆ ಬಳಸುವ ಟೇಬಲ್ 450 ಕೆ.ಜಿ ಸಾಮರ್ಥ್ಯವನ್ನು ಹೊಂದಿದ್ದು ಅದಕ್ಕೆ ತಕ್ಕಂತೆ ಎಮಾನ್‌ ಅವರ ದೇಹದ ತೂಕ 450 ಕೆ.ಜಿ.ಗಿಂತಲೂ ಕಡಿಮೆ ಮಾಡಬೇಕಾದ ಅನಿವಾರ್ಯತೆ ಇದೆ. ಕೈ,ಕಾಲುಗಳ ಚಲನೆ ಉತ್ತಮವಾಗಿದೆ ಎಂದು ವೈದ್ಯ ಮುಫಜ್ಜಲ್ ಲಖಡವಾಲಾ ತಿಳಿಸಿದ್ದಾರೆ.

ಎಮಾನ್‌ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲು ತಜ್ಞ ವೈದ್ಯರ ತಂಡ ರಚಿಸಲಾಗಿದೆ. ವೈದ್ಯರ ತಂಡದಲ್ಲಿ ಹೃದ್ರೋಗ ತಜ್ಞರು, ಅರಿವಳಿಕೆ ವೈದ್ಯರು, ನರಶಾಸ್ತ್ರ ಮತ್ತು ಮೂತ್ರಪಿಂಡ ಚಿಕಿತ್ಸಾ ವೈದ್ಯರು ಇದ್ದಾರೆ.

ADVERTISEMENT

ಈ ವರ್ಷಾಂತ್ಯಕ್ಕೆ ಎಮಾನ್‌ ಅವರ ದೇಹದ ತೂಕ 200 ಕೆ.ಜಿ.ಗೆ ಇಳಿಸುವ ಗುರಿ ಹೊಂದಿದ್ದು, ಪ್ರಸ್ತುತ ಎಮಾನ್‌ ಅವರಿಗೆ ಪ್ರೊಟೀನ್‌, ನಾರಿನಾಂಶ ಹೆಚ್ಚಾಗಿರುವ  1200 ಕ್ಯಾಲೋರಿ  ಪ್ರಮಾಣದಲ್ಲಿ ಆಹಾರ ನೀಡಲಾಗುತ್ತಿದೆ.

ಎಮಾನ್‌ ಅವರ ದೇಹದಲ್ಲಿ ಸಂಗ್ರಹವಾಗಿರುವ ಅಧಿಕ ಪ್ರಮಾಣದ ದ್ರವ ಹೊರ ತೆಗೆಯಲಾಗುತ್ತಿದೆ. ಅವರ ಶಸ್ತ್ರಚಿಕಿತ್ಸೆಯ ವೀಸಾ ಮಾರ್ಚ್‌ 7 ಕ್ಕೆ ಮುಕ್ತಯವಾಗಲಿದ್ದು, ಹೊಸ ವೀಸಾ ಪಡೆಯಲು ಆಸ್ಪತ್ರೆಯ ಅಧಿಕಾರಿಗಳು ಶೀಘ್ರ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.